ETV Bharat / sports

ಫೀಲ್ಡಿಂಗ್​ ವೇಳೆ ಗಾಯ.. ಮೈದಾನದಿಂದ ಹೊರ ನಡೆದ ಡೇವಿಡ್ ವಾರ್ನರ್ - ಡೇವಿಡ್ ವಾರ್ನರ್​ಗೆ ಗಾಯ

ಸಿಡ್ನಿಯಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದಾರೆ..

Warner to undergo scan for groin injury
ಮೈದಾನದಿಂದ ಹೊರ ನಡೆದ ಡೇವಿಡ್ ವಾರ್ನರ್
author img

By

Published : Nov 29, 2020, 3:19 PM IST

ಸಿಡ್ನಿ (ಆಸ್ಟ್ರೇಲಿಯಾ) : ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ತೊಡೆಸಂದು ಗಾಯದಿಂದಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮೈದಾನದಿಂದ ಹೊರ ನಡೆದಿದ್ದಾರೆ.

ಭಾರತದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ಅಲ್ಲೇ ಇದ್ದ ವಾರ್ನರ್ ಚೆಂಡನ್ನು ತಡೆಯಲು ಡೈವ್ ಮಾಡಿದ್ರು, ಈ ವೇಳೆ ತೊಡೆಸಂದು ನೋವಿಗೆ ತುತ್ತಾಗಿದ್ದಾರೆ.

ಮತ್ತೆ ಅಬ್ಬರಿಸಿದ ಆಸೀಸ್ ಬ್ಯಾಟ್ಸ್​ಮನ್​ಗಳು: ಭಾರತಕ್ಕೆ 390 ರನ್​ಗಳ ಬೃಹತ್ ಟಾರ್ಗೆಟ್

ಕೂಡಲೇ ಮೈದಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಫಿಸಿಯೋ, ವಾರ್ನರ್​ ಅವರನ್ನು ಕರೆದೊಯ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು, ಸ್ಕ್ಯಾನ್​ ನಡೆಸಿದ ನಂತರ ಗಾಯದ ಬಗ್ಗೆ ಮಾಹಿತಿ ತಿಳಿಯಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.