ETV Bharat / sports

ದೊಡ್ಡ ಮೊತ್ತ ಬೆನ್ನಟ್ಟಲು ಭಾರತಕ್ಕೆ ಧೋನಿಯಂತ ಆಟಗಾರ ಬೇಕಿದೆ : ಮೈಕೆಲ್ ಹೋಲ್ಡಿಂಗ್ - ಎಂಎಸ್ ಧೋನಿ ಲೇಟೆಸ್ಟ್ ನ್ಯೂಸ್

ಶುಕ್ರವಾರ ನಡೆದ ಮೊದಲ ಏಕದಿನ ಪಂಧ್ಯದಲ್ಲಿ 375 ರನ್​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 50 ಓವರ್​ಗಳಲ್ಲಿ 308 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ 66 ರನ್​ಗಳಿಂದ ಸೋಲು ಕಂಡು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ..

MS Dhoni
ಎಂಎಸ್ ಧೋನಿ
author img

By

Published : Nov 28, 2020, 6:14 PM IST

ನವದೆಹಲಿ (ಭಾರತ): ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತ ಬೆನ್ನಟ್ಟಲು ಸಾಧ್ಯವಾಗಬೇಕಾದ್ರೆ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಎಂ ಎಸ್ ಧೋನಿಯಂತಹ ಆಟಗಾರನ ಅಗತ್ಯವಿದೆ ಎಂದು ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಮೈಕೆಲ್ ಹೋಲ್ಡಿಂಗ್ ಹೇಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 66 ರನ್‌ಗಳ ಸೋಲು ಕಂಡ ಬೆನ್ನಲ್ಲೇ ಹೋಲ್ಡಿಂಗ್ ಈ ಹೇಳಿಕೆ ನೀಡಿದ್ದಾರೆ.

"ಭಾರತವು ಕೆಲವು ಉತ್ತಮ ಆಟಗಾರರನ್ನು ಹೊಂದಿದೆ. ಆದರೆ, ಒಂದು ವಿಷಯ ನನಗೆ ಖಚಿತವಾಗಿ ತಿಳಿದಿದೆ, ಎಂಎಸ್ ಧೋನಿ ಅವರ ಅನುಪಸ್ಥಿತಿ ಕೊಹ್ಲಿ ತಂಡವನ್ನು ಕಾಡುತ್ತಿದೆ. ಧೋನಿ ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ, ಅವರು ಚೇಸಿಂಗ್ ಮೇಲೆ ಹಿಡಿತ ಸಾಧಿಸುತ್ತಿದ್ದರು" ಎಂದಿದ್ದಾರೆ.

ಬ್ಯಾಟಿಂಗ್ ​ವೇಳೆ ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ ಎಂದ ಮ್ಯಾಕ್ಸ್​ವೆಲ್

"ಈ ಹಿಂದೆ ಭಾರತ ಹಲವು ಬೃಹತ್ ಮೊತ್ತಗಳನ್ನು ಬೆನ್ನಟಿದೆ. ಆಗ ತಂಡದಲ್ಲಿ ಎಂಎಸ್ ಧೋನಿ ಇದ್ದರು. ಧೋನಿ ತಂಡದಲ್ಲಿದ್ದರೆ ಟಾಸ್​ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ, ಧೋನಿ ಇದ್ದಾರೆ ಎಂಬ ಧೈರ್ಯವಿತ್ತು. ಟೀಂ ಇಂಡಿಯಾದಲ್ಲಿ ನಾನು ಪ್ರತಿಭಾವಂತ ಆಟಗಾರರನ್ನು ನೋಡಿದ್ದೇನೆ. ಆದರೆ, ಅವರಿಗೆ ಧೋನಿಯಂತಹ ಆಟಗಾರನ ಅವಶ್ಯಕತೆ ಇದೆ" ಎಂದು ಹೋಲ್ಡಿಂಗ್ ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಹೇಳಿದ್ದಾರೆ.

ಶುಕ್ರವಾರ ನಡೆದ ಮೊದಲ ಏಕದಿನ ಪಂಧ್ಯದಲ್ಲಿ 375 ರನ್​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 50 ಓವರ್​ಗಳಲ್ಲಿ 308 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ 66 ರನ್​ಗಳಿಂದ ಸೋಲು ಕಂಡು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.