ಬೆಂಗಳೂರು: ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಫೀಲ್ಡಿಂಗ್ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದು ಕೊಹ್ಲಿ ಪಡೆಗೆ ಆಘಾತ ನೀಡಿದೆ.
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದರು.
-
Update: Shikhar Dhawan has gone for an X-Ray. A call on him being available for the game will be taken once he is back & assessed #TeamIndia #INDvAUS pic.twitter.com/94I4tlyxzc
— BCCI (@BCCI) January 19, 2020 " class="align-text-top noRightClick twitterSection" data="
">Update: Shikhar Dhawan has gone for an X-Ray. A call on him being available for the game will be taken once he is back & assessed #TeamIndia #INDvAUS pic.twitter.com/94I4tlyxzc
— BCCI (@BCCI) January 19, 2020Update: Shikhar Dhawan has gone for an X-Ray. A call on him being available for the game will be taken once he is back & assessed #TeamIndia #INDvAUS pic.twitter.com/94I4tlyxzc
— BCCI (@BCCI) January 19, 2020
ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಚೆಂಡು ಪಕ್ಕೆಲುಬಿಗೆ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆಯಷ್ಟೇ ಶಿಖರ್ ಧವನ್ ಆಡುವ ಬಳಗದಲ್ಲಿ ಇರಲಿದ್ದಾರೆ ಎಂಬುದು ಖಚಿತವಾಗಿತ್ತು. ಇದೀಗ ಮತ್ತೆ ಧವನ್ ಭುಜದ ಗಾಯಕ್ಕೊಳಗಾಗಿರುವುದು ಕೊಹ್ಲಿ ಬಳಗದ ಚಿಂತೆಗೆ ಕಾರಣವಾಗಿದೆ.