ETV Bharat / sports

ಲಿಯಾನ್​ ಬೌಲಿಂಗ್​​ನಲ್ಲಿ ಔಟಾಗಿದ್ದಕ್ಕೆ ವಿಷಾದವಿಲ್ಲ ಎಂದ ರೋಹಿತ್​: ವಿಡಿಯೋ

author img

By

Published : Jan 16, 2021, 6:34 PM IST

ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್​ನಲ್ಲಿ 44 ರನ್​ಗಳಿಸಿದ್ದ ವೇಳೆ ಲಿಯಾನ್​ ಬೌಲಿಂಗ್​ನಲ್ಲಿ ಸಿಕ್ಸರ್​ ಬಾರಿಸಿ ಅರ್ಧಶತಕ ಪೂರ್ಣಗೊಳಿಸುವ ಉದ್ದೇಶದಿಂದ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ, ಆ ಶಾಟ್​ ಮಿಸ್​ ಟೈಮ್​ ಆಗಿ ಫೀಲ್ಡರ್​ ಮಿಚೆಲ್ ಸ್ಟಾರ್ಕ್​ ಕೈಸೇರಿತು.

ರೋಹಿತ್ ಶರ್ಮಾ ಔಟ್​
ರೋಹಿತ್ ಶರ್ಮಾ ಔಟ್​

ಬ್ರಿಸ್ಬೇನ್​: ಆಸ್ಟ್ರೇಲಿಯಾದ 4ನೇ ಟೆಸ್ಟ್​ ಪಂದ್ಯದಲ್ಲಿ ನಾಥನ್​ ಲಿಯಾನ್​ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾಗಿದ್ದಕ್ಕೆ ಯಾವುದೇ ವಿಷಾದವಿಲ್ಲ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್​ನಲ್ಲಿ 44 ರನ್​ಗಳಿಸಿದ್ದ ವೇಳೆ ಲಿಯಾನ್​ ಬೌಲಿಂಗ್​ನಲ್ಲಿ ಸಿಕ್ಸರ್​ ಬಾರಿಸಿ ಅರ್ಧಶತಕ ಪೂರ್ಣಗೊಳಿಸುವ ಉದ್ದೇಶದಿಂದ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ, ಆ ಶಾಟ್​ ಮಿಸ್​ ಟೈಮ್​ ಆಗಿ ಫೀಲ್ಡರ್​ ಮಿಚೆಲ್ ಸ್ಟಾರ್ಕ್​ ಕೈಸೇರಿತು. ಈ ಶಾಟ್ ಪ್ರಯೋಗಿಸಿದ್ದಕ್ಕೆ ಮಾಜಿ ಲೆಜೆಂಡ್​ ಸುನೀಲ್ ಗವಾಸ್ಕರ್​ ರೋಹಿತ್ ಬೇಜವಾಬ್ದಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್​ ಒಪ್ಪಿಸಿದರೆಂದು ಕಿಡಿ ಕಾರಿದ್ದರು. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿರುವ ಹಿಟ್​ಮ್ಯಾನ್​ ತಮ್ಮ ಬ್ಯಾಟಿಂಗ್ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ರೋಹಿತ್​ ಶರ್ಮಾ

" ನಾನು ಆ ಎಸೆತವನ್ನು ಹೊಡೆಯಲು ಬಯಸಿದ ಜಾಗಕ್ಕೆ ತಲುಪಿದೆ, ಆದರೆ ಚೆಂಡನ್ನು ನಾನಂದು ಕೊಂಡಂತೆ ಕನೆಕ್ಟ್​ ಮಾಡಲಾಗಲಿಲ್ಲ. ಸ್ಕ್ವೇರ್​ಲೆಗ್ ಮತ್ತು ಲಾಂಗ್ ಆನ್ ಮಧ್ಯೆಯಿದ್ದ ಗ್ಯಾಪ್ ನಡುವೆ ಚೆಂಡನ್ನು ಬಾರಿಸಬೇಕೆಂದಿದ್ದೆ. ಆದರೆ ಅದು ನಾನಂದುಕೊಂಡ ಹಾಗೆ ಆಗಲಿಲ್ಲ. ನಾನು ಆ ರೀತಿಯ ಹೊಡೆತಗಳನ್ನು ಬಾರಿಸಿಲು ಸದಾ ಇಷ್ಟಪಡುತ್ತೇನೆ. ಇಲ್ಲಿಗೆ ಬರುವ ಮುಂಚೆಯೇ ಈ ಪಿಚ್​ ಬ್ಯಾಟಿಂಗ್​ಗೆ ನೆರವಾಗುವ ಬಗ್ಗೆ ತಿಳಿದುಕೊಂಡಿದ್ದೆವು. ಏಕೆಂದರೆ ಇಲ್ಲಿ ಬೌನ್ಸ್​ ಆದ ಚೆಂಡುಗಳು ನೇರ ಕೀಪರ್​ಗೆ ಸೇರುತ್ತವೆ. ಹಾಗಾಗಿ ನಾನು ಇಂತಹ ಪಿಚ್​ನಲ್ಲಿ ಆಡಲು ನಾನು ತುಂಬಾ ಆನಂದಿಸುತ್ತೇನೆ " ಎಂದು ಎರಡನೇ ದಿನದಾಟದ ನಂತರ ನಡೆದ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ರೋಹಿತ್ ಹೇಳಿದರು.

ನಾನು ಮೈದಾನಕ್ಕೆ ಬಂದು, ಕೆಲವು ಓವರ್​ಗಳ ಆಡಿದ ನಂತರ ಅಲ್ಲಿ ಹೆಚ್ಚು ಸ್ವಿಂಗ್​ ಆಗುತ್ತಿಲ್ಲ ಎಂದು ತಿಳಿಯಿತು, ಹಾಗಾಗಿ ನಾನು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಲು ಬಯಸಿದೆ. ಆ ಎಸೆತದಲ್ಲಿ ಔಟ್ ಆಗಿದ್ದು ದುರದೃಷ್ಟಕರ. ಆದರೆ ಆ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಇದು ನಾನು ಇಷ್ಟಪಡುವ ಸಂಗತಿಯಾಗಿದೆ. ಆ ಹೊಡೆತ ಬಾರಿಸುವಾಗ ನಾನು ಅಂದುಕೊಂಡ ಹಾಗೆ ಚೆಂಡನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಅಷ್ಟೇ ಎಂದು ಹಿಟ್​ಮ್ಯಾನ್ ತಿಳಿಸಿದ್ದಾರೆ.

ಇದನ್ನು ಓದಿ:ನಟರಾಜನ್​ ಭಾರತ ಬಯಸಿದಂತೆ ಬೌಲಿಂಗ್ ಮಾಡುತ್ತಿದ್ದಾರೆ : ರೋಹಿತ್ ಶರ್ಮಾ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.