ಸಿಡ್ನಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 10 ನೇ ಬಾರಿಗೆ ಔಟ್ ಮಾಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪಿಂಕ್ ಟೆಸ್ಟ್‌ನ ಮೂರನೇ ದಿನ, ಅಶ್ವಿನ್ ಎರಡನೇ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ವಾರ್ನರ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಅಶ್ವಿನ್ ಹೆಚ್ಚಾಗಿ ಔಟ್ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ. ಆಫ್ - ಸ್ಪಿನ್ನರ್ ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಅವರನ್ನು ಒಂಬತ್ತು ಬಾರಿ ಔಟ್ ಮಾಡಿದ್ರೆ, ಬೆನ್ ಸ್ಟೋಕ್ಸ್ ಅವರನ್ನು ಏಳು ಬಾರಿ ಪೆವಿಲಿಯನ್ ಸೇರಿಸಿದ್ದಾರೆ.
ಓದಿ: ಪಂತ್ ಬೆನ್ನಲ್ಲೆ ಜಡೇಜಾಗೂ ಗಾಯ: ಸ್ಕ್ಯಾನ್ಗಾಗಿ ಆಸ್ಪತ್ರೆಗೆ ತೆರಳಿದ ಅಲ್ರೌಂಡರ್
ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಮಾತ್ರ ಅಶ್ವಿನ್‌ಗಿಂತ ಹೆಚ್ಚಿನ ಸಂದರ್ಭಗಳಲ್ಲಿ ವಾರ್ನರ್ ಅವರನ್ನು ಔಟ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಾಡ್ 12 ಬಾರಿ ವಾರ್ನರ್ ಅವರನ್ನು ಮೈದಾನದಿಂದ ಹೊರಗಟ್ಟಿದ್ದಾರೆ.
ಅಶ್ವಿನ್ ಎಸೆತದಲ್ಲಿ ಸ್ವೀಪ್ ಶಾಟ್ ಮಾಡಲು ಹೋದ ವಾರ್ನರ್ ವಿಫಲರಾದರು, ಪರಿಣಾಮ ಚೆಂಡು ಅವರ ಪ್ಯಾಡ್ಗೆ ಬಡಿಯಿತು. ಟೀಂ ಇಂಡಿಯಾ ಆಟಗಾರರ ಬಲವಾದ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ರು. ಆದರೆ, ಅಂಪೈರ್ ತೀರ್ಪಿನಿಂದ ಸಮಾಧಾನವಾಗದ ವಾರ್ನರ್ ಡಿಆರ್ಎಸ್ ಮನವಿ ಮಾಡಿದ್ರು. ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು.