ಬ್ರಿಸ್ಬೇನ್: ಆಲ್ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 336ಕ್ಕೆ ಸರ್ವಪತನ ಕಂಡಿದ್ದು 33 ರನ್ಗಳ ಅಲ್ಪ ಹಿನ್ನಡೆ ಹೊಂದಿದೆ.
-
India are all out for 336, just 33 runs short of Australia's first innings total. #AUSvIND scorecard: https://t.co/oDTm20rn07 pic.twitter.com/3gtFWD2heu
— ICC (@ICC) January 17, 2021 " class="align-text-top noRightClick twitterSection" data="
">India are all out for 336, just 33 runs short of Australia's first innings total. #AUSvIND scorecard: https://t.co/oDTm20rn07 pic.twitter.com/3gtFWD2heu
— ICC (@ICC) January 17, 2021India are all out for 336, just 33 runs short of Australia's first innings total. #AUSvIND scorecard: https://t.co/oDTm20rn07 pic.twitter.com/3gtFWD2heu
— ICC (@ICC) January 17, 2021
ಎರಡನೇ ದಿನದ ದ್ವಿತೀಯ ಅವಧಿಯ ಆಟ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆ ಹಾಕಿದರು. 3ನೇ ವಿಕೆಟ್ಗೆ ಈ ಜೋಡಿ 45 ರನ್ ಒಟ್ಟುಗೂಡಿಸಿತು.
ಎರಡನೇ ದಿನದ ದ್ವಿತೀಯ ಆಟದ ಅವಧಿ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆ ಹಾಕಿದರು. 3ನೇ ವಿಕೆಟ್ಗೆ ಈ ಜೋಡಿ 45 ರನ್ ಸೇರಿಸಿತು.
94 ಎಸೆತಗಳಲ್ಲಿ 25 ರನ್ ಗಳಿಸಿದ ಚೇತೇಶ್ವರ ಪೂಜಾರ, ಹೆಜಲ್ವುಡ್ ಎಸೆತದಲ್ಲಿ ಪೇನ್ಗೆ ಕ್ಯಾಚಿತ್ತು ನಿರ್ಗಮಿಸಿದರು. ತಾಳ್ಮೆಯಿಂದ ಎಚ್ಚರಿಕೆಯ ಆಟವಾಡುತ್ತಿದ್ದ ರಹಾನೆ, ಸ್ಟಾರ್ಕ್ ಬೌಲಿಂಗ್ನಲ್ಲಿ ಎಡವಿದರು. ಕೇವಲ 37 ರನ್ಗಳಿಗೆ ವೇಡ್ಗೆ ಕ್ಯಾಚ್ ಕೊಟ್ಟು ನಿರಾಸೆ ಅನುಭವಿಸಿದರು.
ನಂತರ ಜೊತೆಯಾದ ಮಯಾಂಕ್ ಮತ್ತು ಪಂತ್ ಜೋಡಿಯೂ ಕೂಡ ಹೆಚ್ಚು ಕಾಲ ಬ್ಯಾಟ್ ಬೀಸಲಿಲ್ಲ. 38 ರನ್ ಗಳಿಸಿದ ಅಗರ್ವಾಲ್, ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ಪಂತ್, ಇಂದಿನ ಪಂದ್ಯದಲ್ಲಿ 23 ರನ್ಗಳಿಸಿ ಹೆಜಲ್ವುಡ್ ಎಸೆತದಲ್ಲಿ ಗ್ರೀನ್ಗೆ ಕ್ಯಾಚ್ ನೀಡಿ ಹೊರ ನಡೆದರು.
-
💯 stand between this duo 💪💪
— BCCI (@BCCI) January 17, 2021 " class="align-text-top noRightClick twitterSection" data="
How many retweets for this brilliant partnership?#AUSvIND pic.twitter.com/wbgYncJYlq
">💯 stand between this duo 💪💪
— BCCI (@BCCI) January 17, 2021
How many retweets for this brilliant partnership?#AUSvIND pic.twitter.com/wbgYncJYlq💯 stand between this duo 💪💪
— BCCI (@BCCI) January 17, 2021
How many retweets for this brilliant partnership?#AUSvIND pic.twitter.com/wbgYncJYlq
ಈ ವೇಳೆ 7ನೇ ವಿಕೆಟ್ಗೆ ಜೊತೆಯಾದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಭಾರತದ ಸ್ಕೋರ್ ಹೆಚ್ಚಿಸಿದರು. ಆಸೀಸ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಇಲ್ಲಿಯವರೆಗೆ 7ನೇ ವಿಕೆಟ್ಗೆ 123ರನ್ ಒಟ್ಟುಗೂಡಿಸಿ, ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶಾರ್ದೂಲ್ 67ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಸೈನಿ 5 ರನ್ ಗಳಿಸಿ ಹೆಜಲ್ವುಡ್ ಎಸೆತದಲ್ಲಿ ಸ್ಟಿವ್ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ ಸುಂದರ್ 62 ರನ್ ಗಳಿಸಿ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಬಂದ ಸಿರಾಜ್ 13 ರನ್ ಗಳಿಸಿ ಬೌಲ್ಡ್ ಆಗುವ ಮೂಲಕ ಟೀಂ ಇಂಡಿಯಾ 336 ರನ್ಗಳಿಗೆ ಸರ್ವಪತನ ಕಂಡಿದ್ದು, 33 ರನ್ಗಳ ಅಲ್ಪ ಹಿನ್ನಡೆ ಹೊಂದಿದೆ. ನಟರಾಜನ್ 1 ರನ್ ಗಳಿಸಿ ಅಜೇಯರಾಗಿ ಉಳಿದ್ರು.
ಆಸ್ಟ್ರೇಲಿಯಾ ಪರ ಹೆಜಲ್ವುಡ್ 5 ವಿಕೆಟ್ ಪಡೆದ್ರೆ, ಸ್ಟಾರ್ಕ್ ಮತ್ತು ಕಮ್ಮಿನ್ಸ್ ತಲಾ ಎರಡು ಮತ್ತು ಲಿಯಾನ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ ಗಳಿಸಿತ್ತು.