ETV Bharat / sports

ಪೆವಿಲಿಯನ್ ಸೇರಿದ ಅನುಭವಿ ಆಟಗಾರರು: ಸಂಕಷ್ಟದಲ್ಲಿ ಟೀಂ ಇಂಡಿಯಾ

ಭೋಜನ ವಿರಾಮದ ವೇಳೆಗೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದ್ದು, ಮಯಾಂಕ್ 38 ರನ್ ಮತ್ತು ಪಂತ್ 4 ರನ್​ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

India vs Australia 4th Test
ಪೆವಿಲಿಯನ್ ಸೇರಿದ ಅನುಭವಿ ಆಟಗಾರರು
author img

By

Published : Jan 17, 2021, 8:02 AM IST

ಬ್ರಿಸ್ಬೇನ್: ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟಿಂ ಇಂಡಿಯಾ ಅನುಭವಿ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭೋಜನ ವಿರಾಮದ ವೇಳೆಗೆ 208 ರನ್​ಗಳ ಹಿನ್ನಡೆ ಅನುಭವಿಸಿದೆ.

ಮಳೆಯ ಕಾರಣದಿಂದಾಗಿ ಎರಡನೇ ದಿನ ಮೂರನೇ ಸೆಷನ್ ರದ್ದುಗೊಂಡಿತ್ತು. ಎರಡನೇ ದಿನದ ದ್ವಿತೀಯ ಸೆಷನ್ ಮುಕ್ತಾಯದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಪೂಜಾರ ಮತ್ತು ನಾಯಕ ರಹಾನೆ ನಿಧಾನವಾಗಿ ರನ್ ಕಲೆಹಾಕಿದ್ರು. 3ನೇ ವಿಕೆಟ್​ಗೆ ಈ ಜೋಡಿ 45 ರನ್ ಒಟ್ಟುಗೂಡಿಸಿತು.

94 ಎಸೆತಗಳಲ್ಲಿ 25 ರನ್ ಗಳಿಸಿದ ಚೇತೇಶ್ವರ್ ಪೂಜಾರ ಹೆಜಲ್​ವುಡ್ ಎಸೆತದಲ್ಲಿ ಪೇನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ತಾಳ್ಮೆಯಿಂದ ಎಚ್ಚರಿಕೆಯ ಆಟವಾಡುತ್ತಿದ್ದ ನಾಯಕ ರಹಾನೆ ಸ್ಟಾರ್ಕ್​ ಬೌಲಿಂಗ್​ನಲ್ಲಿ ಎಡವಿದ್ರು. ಕೇವಲ 37 ರನ್​ಗಳಿಗೆ ವೇಡ್​ಗೆ ಕ್ಯಾಚ್​ ನೀಡಿ ನಿರಾಸೆ ಅನುಭವಿಸಿದ್ರು.

ಟೀಂ ಇಂಡಿಯಾ ಪ್ರಮುಖ ಅನುಭವಿ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭೋಜನ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದ್ದು, ಮಯಾಂಕ್ 38 ರನ್ ಮತ್ತು ಪಂತ್ 4 ರನ್​ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.