ETV Bharat / sports

ಜಡೇಜಾ, ಬುಮ್ರಾ ಕಮಾಲ್: ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ಮೇಲುಗೈ - ಜಸ್ಪ್ರೀತ್ ಬುಮ್ರಾ ಲೇಟೆಸ್ಟ್ ನ್ಯೂಸ್

ದ್ವಿತೀಯ ದಿನದಾಟದ ಮೊದಲ ಸೆಷನ್​ನಲ್ಲಿ ಉತ್ತಮ ಬೌಲಿಂಗ್ ನಡೆಸಿದ ಜಡೇಜಾ ಮತ್ತು ಬುಮ್ರಾ ಪ್ರಮುಖ ವಿಕೆಟ್​​ಗಳನ್ನು ಪಡೆದು ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.

IND vs AUS
ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ಮೇಲುಗೈ
author img

By

Published : Jan 8, 2021, 7:47 AM IST

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಮೊದಲ ಸೆಷನ್​ನಲ್ಲು ಉತ್ತಮವಾಗಿ ಸ್ಪೆಲ್ ಮಾಡಿದ ಟೀಂ ಇಂಡಿಯಾ ಬೌಲರ್​ಗಳು ಪ್ರಮುಖ ಮೂರು ವಿಕೆಟ್ ಪಡೆದು ಮೇಲುಗೈ ಸಾಧಿಸಿದ್ದಾರೆ.

ಮಳೆಯ ಕಾರಣ ಮೊದಲ ದಿನದ ಪಂದ್ಯದಲ್ಲಿ ಓವರ್​ಗಳನ್ನು ಕಡಿತ ಮಾಡಿದ್ದ ಪರಿಣಾಮ ಎರಡನೇ ದಿನದಾಟ ನಿಗದಿತ ಸಮಯಕ್ಕಿಂತ ಮೊದಲೇ ಆರಂಭವಾಯಿತು. ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಿತ್ತು.

ಇಂದು ಇನ್ನಿಂಗ್ಸ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಲಾಬುಶೇನ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಈ ಜೋಡಿ ಮೂರನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟವಾಡಿತು. ಉತ್ತಮವಾಗಿ ಬ್ಯಾಟ್ ಬೀಸಿದ ಸ್ಮಿತ್ ಟೆಸ್ಟ್ ಕ್ರಿಕೆಟ್​ನಲ್ಲಿ 30ನೇ ಅರ್ಧಶತಕ ಸಿಡಿಸಿದ್ರು. ನಿನ್ನೆಯಿಂದಲೂ ಭಾರತೀಯ ಬೌಲರ್​ಗಳನ್ನು ಕಾಡಿದ್ದ ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದ್ರು.

91 ರನ್​ ಗಳಿಸಿದ್ದ ಲಾಬುಶೇನ್ ಜಡೇಜಾ ಬೌಲಿಂಗ್​ನಲ್ಲಿ ಪೂಜಾರಗೆ ಕ್ಯಾಚ್​ನೀಡಿ ನಿರ್ಗಮಿಸಿದ್ರು. ನಂತರ ಬಂದ ಮ್ಯಾಥ್ಯೂ ವೇಡ್ ಕೇವಲ 13 ರನ್​ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ರೀನ್ ಬುಮ್ರಾ ಎಸೆತದಲ್ಲಿ ಎಲ್​ಬಿ ಬಲೆಗೆಬಿದ್ದು ಶೂನ್ಯ ಸುತ್ತಿದ್ರು.

ಮೊದಲ ಸೆಷನ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು 249 ರನ್​ ಗಳಿಸಿದೆ. ಸ್ಟೀವ್ ಸ್ಮಿತ್ 76 ರನ್​ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.