ನಾಗ್ಪುರ್: ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಸರಣಿಯನ್ನ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ರೂ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯಂಗ್ ಇಂಡಿಯಾ ತಮ್ಮ ಸಾಮರ್ಥ್ಯ ಏನು ಎಂದು ತೋರಿಸಿಕೊಟ್ಟಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕ್ಯಾಪ್ಟನ್ ರೋಹಿತ್ ಶರ್ಮಾ, ನಾವು ಮುಂದಿನ ಟಿ-20 ಸರಣಿಯಲ್ಲಿ ಇದೇ ರೀತಿಯ ಪ್ರದರ್ಶನ ನೀಡಿದರೆ ಖಂಡಿತವಾಗಿ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು ಆಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಇದೀಗ ಟೀಂ ಇಂಡಿಯಾ ಆಯ್ಕೆಯಾಗಬೇಕಾಗಿರುವ ಕಾರಣ, ಯಾವ ಪ್ಲೇಯರ್ಸ್ಗಳಿಗೆ ಚಾನ್ಸ್ ನೀಡಬೇಕು ಎಂಬ ತಲೆನೋವು ಆಯ್ಕೆ ಸಮಿತಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮುಂದೆ ಉದ್ಭವವಾಗಲಿದೆ ಎನ್ನುವ ಅರ್ಥದಲ್ಲಿ ರೋಹಿತ್ ಮಾತನಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ಮಿಂಚು ಹರಿಸಿದ್ರೆ, ಬೌಲಿಂಗ್ನಲ್ಲಿ ಚಹಲ್,ಚಹಾರ್, ಶಿವಂ ದುಬೆ ಅದ್ಭುತ ಪ್ರದರ್ಶನ ನೀಡಿದ್ದಾರೆ.
- IND vs BAN 2019, 3rd T20I: Match Highlights https://www.bcci.tv/videos/137108/ind-vs-ban-2019-3rd-t20i-match-highlights via @bcci