ETV Bharat / sports

ಪುಕೋವ್​ಸ್ಕಿ ಫಿಟ್​ ಆಗದಿದ್ದರೆ ಮತ್ತೊಬ್ಬ ಓಪನರ್​ ಸಿದ್ಧವಾಗಿದ್ದಾರೆ : ಜಸ್ಟಿನ್ ಲ್ಯಾಂಗರ್​

author img

By

Published : Jan 13, 2021, 4:42 PM IST

ಇಂದು ಅಭ್ಯಾಸದ ವೇಳೆ ಅವರು ಹೇಗೆ ಚಟುವಟಿಕೆಯಿಂದಿದ್ದರು, ಫುಲ್ಸ್​ ಅಪ್​ ಮಾಡುತ್ತಿದ್ದರು ಎಂಬುವುದನ್ನು ನೋಡಿದ್ದೇವೆ. ಹಾಗಾಗಿ, ಅವರು 4ನೇ ಟೆಸ್ಟ್​ ಪಂದ್ಯದ ವೇಳೆಗೆ ಸರಿಯಾಗಲಿದ್ದಾರೆ ಎಂಬ ಆಶಯದಲ್ಲಿದ್ದೇವೆ. ಒಂದು ವೇಳೆ ಅವರು ಫಿಟ್​ ಆಗದಿದ್ದರೆ, ಮಾರ್ಕಸ್​ ಹ್ಯಾರಿಸ್​ ಇನ್ನಿಂಗ್ಸ್​ ಆರಂಭಿಸುವುದು ಸ್ಪಷ್ಟ..

ಜಸ್ಟಿನ್​ ಲ್ಯಾಂಗರ್​
ಜಸ್ಟಿನ್​ ಲ್ಯಾಂಗರ್​

ಬ್ರಿಸ್ಬೇನ್ : ಭಾರತದ ವಿರುದ್ಧ ಮೂರನೇ ಟೆಸ್ಟ್​ ವೇಳೆ ಭುಜದ ನೋವಿಗೆ ತುತ್ತಾಗಿರುವ ವಿಲ್​ ಪುಕೋವ್​ಸ್ಕಿ ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಒಂದು ಅವರು ಫಿಟ್​ ಆಗದಿದ್ದರೆ ನಿರ್ಣಾಯಕ ಟೆಸ್ಟ್​ನಲ್ಲಿ ಆರಂಭಿಕನಾಗಿ ಮಾರ್ಕಸ್ ಹ್ಯಾರೀಸ್ ಕಣಕ್ಕಿಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್​ ಜಸ್ಟಿನ್ ಲ್ಯಾಂಗರ್​ ಹೇಳಿದ್ದಾರೆ.

ಸಿಡ್ನಿ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಪುಕೋವ್​ಸ್ಕಿ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೊಳಗಾಗಿದ್ದರು. ಹಾಗಾಗಿ, ಪಂದ್ಯದ ನಂತರ ಅವರು ಸ್ಕ್ಯಾನಿಂಗ್​ಗೆ ಒಳಗಾಗಿದ್ದರು. ವಿಲ್​ ಡೈವ್​ ಮಾಡುವ ಮೊದಲು ಭುಜದ ನೋವನ್ನು ಹೊಂದಿದ್ದರು. ಅವರು ಪಂದ್ಯದ ನಂತರ ಸ್ಕ್ಯಾನಿಂಗ್​ಗೆ ಹೊರಟಿದ್ದು ಕೇವಲ ಏನಾಗಿರಬಹುದು ಎಂದು ತಿಳಿದುಕೊಳ್ಳಲು ಮಾತ್ರ.

ಆಸೀಸ್‌ ಕೋಚ್‌ ಜಸ್ಟಿನ್ ಲ್ಯಾಂಗರ್..​

ಇಂದು ಅಭ್ಯಾಸದ ವೇಳೆ ಅವರು ಹೇಗೆ ಚಟುವಟಿಕೆಯಿಂದಿದ್ದರು, ಫುಲ್ಸ್​ ಅಪ್​ ಮಾಡುತ್ತಿದ್ದರು ಎಂಬುವುದನ್ನು ನೋಡಿದ್ದೇವೆ. ಹಾಗಾಗಿ, ಅವರು 4ನೇ ಟೆಸ್ಟ್​ ಪಂದ್ಯದ ವೇಳೆಗೆ ಸರಿಯಾಗಲಿದ್ದಾರೆ ಎಂಬ ಆಶಯದಲ್ಲಿದ್ದೇವೆ. ಒಂದು ವೇಳೆ ಅವರು ಫಿಟ್​ ಆಗದಿದ್ದರೆ, ಮಾರ್ಕಸ್​ ಹ್ಯಾರಿಸ್​ ಇನ್ನಿಂಗ್ಸ್​ ಆರಂಭಿಸುವುದು ಸ್ಪಷ್ಟ ಎಂದು ಲ್ಯಾಂಗರ್​ ಹೇಳಿದ್ದಾರೆ.

ಪುಕೋವ್​ಸ್ಕಿ ಪದಾರ್ಪಣೆ ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿ ತಮ್ಮ ಟೆಸ್ಟ್​ ಕೆರರಿಯರ್​ ಉತ್ತಮವಾಗಿ ಆರಂಭಿಸಿದ್ದರು. ಇನ್ನು, ಹ್ಯಾರೀಸ್​ ಕೂಡ ಆಸೀಸ್​ ಪರ 9 ಟೆಸ್ಟ್ ಪಂದ್ಯಗಳನ್ನಾಡಿದ್ದರು, 2 ಅರ್ಧಶತಕ ಸಹಿತ 385 ರನ್​ಗಳಿಸಿದ್ದಾರೆ.

ಇದನ್ನು ಓದಿ:ಭಾರತೀಯರ ಸರಣಿ ಗೆಲುವಿನ ಹಸಿವಿನ ಮುಂದೆ ಗಬ್ಬಾದಲ್ಲಿ ನಮ್ಮ ದಾಖಲೆಗಳು ಹೆಚ್ಚು ಅನುಕೂಲಕರವಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.