ETV Bharat / sports

ಯುವಕರು ತಮ್ಮ ಸಾಮರ್ಥ್ಯ ತೋರಲು ಧೋನಿ ಅವಕಾಶ ನೀಡುತ್ತಿದ್ದರು: ಎಸ್​. ಬದ್ರಿನಾಥ್​

ಧೋನಿ ನಾಯಕತ್ವದಲ್ಲಿ ಆಡಿದ ತಮಿಳುನಾಡಿನ ಸುಬ್ರಮಣಿಯಮ್​ ಬದ್ರಿನಾಥ್​ ಧೋನಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಧೋನಿ ಅವರು ಆಟಗಾರನನ್ನು ನಂಬಿದರೆ ಯಾವುದೇ ಕಾರಣಕ್ಕೂ ಕೈಬಿಡುತ್ತಿರಲಿಲ್ಲ. ಅದೇ ರೀತಿ ಆಟಗಾರನ ಮೇಲೆ ನಂಬಿಕೆ ಇಲ್ಲ ಎಂದರೆ, ಆತನನ್ನು ದೇವರೇ ಬಂದರೂ ಸಹಾಯ ಮಾಡಲಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

MS Dhoni
ಮಹೇಂದ್ರ ಸಿಂಗ್​ ಧೋನಿ
author img

By

Published : Jul 11, 2020, 12:36 PM IST

ಚೆನ್ನೈ: ಎಂಎಸ್​ ಧೋನಿ ನಾಯಕನಾಗಿ ಯುವ ಕ್ರಿಕೆಟಿಗರ ಬೆಳವಣಿಗೆಯ ಜೊತೆಗೆ ಅವರಿಗೆ ಬೆಂಬಲ ನೀಡಿ, ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ರೋಹಿತ್​ ಶರ್ಮಾ. ಐದಾರು ವರ್ಷಗಳ ಕಾಲ ಭಾರತ ತಂಡದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಮೇಲೆ ಧೋನಿ ಇಟ್ಟಿದ್ದ ನಂಬಿಕೆಯಿಂದಲೇ ಅವರು ಇಂದು ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಆಗಿ ಹೊರ ಹೊಮ್ಮಿದ್ದಾರೆ ಎಂದು ಬದ್ರಿನಾಥ್​ ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಆಡಿದ ತಮಿಳುನಾಡಿನ ಸುಬ್ರಮಣಿಯಮ್​ ಬದ್ರಿನಾಥ್​ ಧೋನಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಧೋನಿ ಅವರು ಆಟಗಾರನನ್ನು ನಂಬಿದರೆ ಯಾವುದೇ ಕಾರಣಕ್ಕೂ ಕೈಬಿಡುತ್ತಿರಲಿಲ್ಲ. ಅದೇ ರೀತಿ ಆಟಗಾರನ ಮೇಲೆ ನಂಬಿಕೆ ಇಲ್ಲ ಎಂದರೆ, ಆತನನ್ನು ದೇವರೇ ಬಂದರೂ ಸಹಾಯ ಮಾಡಲಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

" ಧೋನಿ ಯಾವಾಗಲೂ ಕೆಲವು ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ನನ್ನನ್ನು ಕೂಡ ಕಠಿಣ ಸಂದರ್ಭದಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದರು" ಎಂದು ಬದ್ರಿನಾಥ್​ ತಮ್ಮನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

S Badrinath
ಎಸ್​ ಬದ್ರಿನಾಥ್​

"ತಂಡದಲ್ಲಿ ನನ್ನದು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಪಾತ್ರವಾಗಿತ್ತು. ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕೊಡುತ್ತಿದ್ದದ್ದು ಧೋನಿ ಅವರ ಬಹುದೊಡ್ಡ ಶಕ್ತಿಯಾಗಿತ್ತು. ಧೋನಿ ಒಮ್ಮೆ ಉತ್ತಮ ಎಂದು ನಂಬಿದರೆ, ಬದ್ರಿ ಅಲ್ಲಿರುತ್ತಿದ್ದರು. ಒಮ್ಮೆ ಅವರು ನಂಬಿದರೆ, ನಂತರ ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. 'ನಾನು ಅವರನ್ನ ನಂಬಿದ್ದೇನೆ, ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲಿ' ಎಂಬ ಭಾವನೆ ಅವರಲ್ಲಿತ್ತು ಎಂದಿದ್ದಾರೆ.

ಅದೇ ರೀತಿ, ಅವರು ನಿಮ್ಮನ್ನು ನಂಬಲಿಲ್ಲ ಎಂದರೆ, ಆ ದೇವರೆ ಬಂದರೂ ನಿಮಗೆ ಸಹಾಯ ಮಾಡಲಾರರು ಎಂದು ಎಸ್​ ಬದ್ರಿನಾಥ್​ ಹೇಳಿಕೊಂಡಿದ್ದಾರೆ.

ಸಿಎಸ್‌ಕೆ ಪರ ಧೋನಿ ನಾಯಕತ್ವದಲ್ಲಿ ಆಡಿರುವ ಬದ್ರಿನಾಥ್​ , ಧೋನಿ ಎಲ್ಲ ಆಟಗಾರರನ್ನು ಒಂದೇ ರೀತಿ ಪರಿಗಣಿಸುತ್ತಿದ್ದರು ಮತ್ತು ತಂಡದಲ್ಲಿ ಸೌಹಾರ್ದತೆಯ ಭಾವವನ್ನು ಬೆಳೆಸಲು ಅದು ಸಹಾಯ ಮಾಡುತ್ತಿತ್ತು ಎನ್ನುವ ಮೂಲಕ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.