ಲಂಡನ್: ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 227 ರನ್ಗಳಿಂದ ಸೋಲುಕಂಡ ನಂತರ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 420 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೊಹ್ಲಿ ಪಡೆ ಬ್ಯಾಟಿಂಗ್ ವೈಫಲ್ಯದಿಂದ 192 ರನ್ಗಳಿಗೆ ಆಲೌಟ್ ಆಗುವ ಮೂಲಕ 227ರನ್ಗಳ ಸೋಲು ಕಂಡಿತು.
ಈ ಸೋಲಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಗೆಲುವಿನ ಸರಾಸರಿ 68.3ಕ್ಕೆ ಕುಸಿದಿದ್ದರಿಂದ ಮೊದಲ ಸ್ಥಾನದಲ್ಲಿದ್ದ ಭಾರತ 4ನೇ ಸ್ಥಾನಕ್ಕಿಳಿದರೆ, ಇಂಗ್ಲೆಂಡ್ ಈ ಗೆಲುವಿನೊಂದಿಗೆ ಗೆಲುವಿನ ಸರಾಸರಿಯನ್ನು 70.2ಕ್ಕೇ ಏರಿಸಿಕೊಂಡು ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.
-
A huge win over India in the first Test has propelled England to the top of the ICC World Test Championship standings 👀#WTC21 pic.twitter.com/8AaC8XMrjr
— ICC (@ICC) February 9, 2021 " class="align-text-top noRightClick twitterSection" data="
">A huge win over India in the first Test has propelled England to the top of the ICC World Test Championship standings 👀#WTC21 pic.twitter.com/8AaC8XMrjr
— ICC (@ICC) February 9, 2021A huge win over India in the first Test has propelled England to the top of the ICC World Test Championship standings 👀#WTC21 pic.twitter.com/8AaC8XMrjr
— ICC (@ICC) February 9, 2021
ಇನ್ನು ನ್ಯೂಜಿಲ್ಯಾಂಡ್ 70 ಗೆಲುವಿನ ಸರಾಸರಿ ಅಂಕದೊಂದಿಗೆ 2ನೇ ಸ್ಥಾನದಲ್ಲಿ, ಆಸ್ಟ್ರೇಲಿಯಾ 69.5ರ ಸರಾಸರಿ ಅಂಕದೊಂದಿದೆ 3ನೇ ಸ್ಥಾನದಲ್ಲಿ ತಟಸ್ಥವಾಗಿವೆ.
ಭಾರತ ತಂಡ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಬೇಕಾದರೆ ಮುಂದಿನ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಇದನ್ನೂ ಓದಿ:ಚೆನ್ನೈ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 227 ರನ್ಗಳ ಹೀನಾಯ ಸೋಲು