ಸೌತಮ್ಟನ್: ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಪಡೆ ಕೇವಲ 224ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡ 50 ಓವರ್ಗಳಲ್ಲಿ ಕೊಹ್ಲಿ(67) ಜಾಧವ್(52) 8 ವಿಕೆಟ್ ಕಳೆದುಕೊಂಡು 224 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಇಳಿದಿದ್ದ ಕೊಹ್ಲಿಪಡೆ ಕೇವಲ 7 ರನ್ಗಳಿಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 10 ಎಸೆತಗಳಲ್ಲಿ 1 ರನ್ಗಳಿಸಿದ್ದ ರೋಹಿತ್, ಮುಜೀಬ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ನಂತರ ಬಂದ ಕೊಹ್ಲಿ(63) ರಾಹುಲ್(30) ಜೊತೆಗೂಡಿ 58 ರನ್ಗಳ ಜೊತೆಯಾಟ ನೀಡಿದರು. 53 ಎಸೆತಗಳಲ್ಲಿ 2 ಬೌಂಡರಿ ಸಹಿತ 30 ರನ್ಗಳಿಸಿದ್ದ ರಾಹುಲ್ ರಿವರ್ ಸ್ವೀಪ್ ಮಾಡಲೆತ್ನಿಸಿ ನಬಿಗೆ ವಿಕೆಟ್ ಒಪ್ಪಿಸಿದರು. ನಂತರ ಕೊಹ್ಲಿ ಜೊತೆಗೂಡಿದ ವಿಜಯ್ 29 ರನ್ಗಳಿಸಿ ರಹ್ಮತ್ ಶಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ವಿಜಯ್ ಬೆನ್ನಲ್ಲೇ 63 ಎಸೆತಗಳಲ್ಲಿ 67 ರನ್ಗಳಿಸಿದ್ದ ನಾಯಕ ಕೊಹ್ಲಿ ಕೂಡ ನಬಿ ಬೌಲಿಂಗ್ನಲ್ಲಿ ರಹ್ಮತ್ ಶಾಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಈ ಹಂತದಲ್ಲಿ ಒಂದಾದ ಧೋನಿ ಹಾಗೂ ಜಾಧವ್ ವಿಕೆಟ್ ಕಳೆದುಕೊಳ್ಳದೆ ಹೋದರೂ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದರಿಂದ ರನ್ಗತಿ ಇಳಿಯತೊಡಗಿತು. ಧೋನಿ 52 ಎಸೆತಗಳಲ್ಲಿ 28 ರನ್ಗಳಿಸಿ ರಶೀದ್ ಖಾನ್ ಬೌಲಿಂಗ್ನಲ್ಲಿ ಸ್ಟಂಪ್ ಆದರು. ಜಾಧವ್ 68 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ಗಳಿಸಿ ಇನ್ನಿಂಗ್ಸ್ ಮುಕ್ತಾಯಕ್ಕೆ ಒಂದು ಎಸೆತ ಬಾಕಿಯಿಗಿರುವಾಗ ಔಟಾದರು. ಇನ್ನು ಪಾಂಡ್ಯ 7, ಶಮಿ 1, ರನ್ಗೆ ಔಟಾದರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಸ್ಪಿನ್ ಬೌಲರ್ಗಳಾದ ಮುಜೀಬ್ 10 ಓವರ್ಗಳಲ್ಲಿ 26 ರನ್ ನೀಡಿ 1 ವಿಕೆಟ್, ನಬಿ 9 ಓವರ್ಗಳಲ್ಲಿ 33 ರನ್ ನೀಡಿ 2 ವಿಕೆಟ್, ರಶೀದ್ 10 ಓವರ್ಗಳಲ್ಲಿ 38 ರನ್ ನೀಡಿ 1 ವಿಕೆಟ್ ಹಾಗೂ ರಹ್ಮತ್ ಶಾ 5 ಓವರ್ಗಳಲ್ಲಿ 22 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ವೇಗಿಗಳು ಕೊಂಚ ದುಬಾರಿಯಾದರೂ ವಿಕೆಟ್ ಪಡೆಯುವಲ್ಲಿ ಸಫಲರಾದರು. ನಾಯಕ ನೈಬ್ 51ಕ್ಕೆ2, ಅಫ್ಟಬ್ ಆಲಂ 54ಕ್ಕೆ 1 ವಿಕೆಟ್ ಪಡೆದು ಮಿಂಚಿದರು.