ಸೌತಾಮ್ಟನ್ : ವಿಶ್ವಕಪ್ನಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ 50 ಓವರ್ಗಳಲ್ಲಿ ಕೇವಲ 8 ವಿಕೆಟ್ ಕಳೆದುಕೊಂಡು 224 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಅಫ್ಘಾನ್‌ನಂತಹ ಸ್ಪಿನ್ ಬೌಲಿಂಗ್ ತಂಡದೆದರು, ಅದೂ ಸೌತಾಮ್ಟನ್ನಂತಹ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ತಂಡದ ಆಯ್ಕೆ ಮಾಡುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಎಲ್ಲಾ ಬಲಗೈ ಬೌಲರ್‌ಗಳನ್ನೇ ಆಯ್ಕೆ ಮಾಡಿರುವುದು ತಂಡಕ್ಕೆ ಹೊಡೆತ ನೀಡಿದೆ. ಇಡೀ ತಂಡದಲ್ಲಿ ಕುಲ್ದೀಪ್ ಮಾತ್ರ ಎಡಗೈ ಬೌಲರ್ ಆಗಿದ್ದಾರೆ.
ಇದೇ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಅನುಭವವಿದ್ದರೂ ಕೊಹ್ಲಿ ಎಡಗೈ ಬ್ಯಾಟ್ಸ್ಮನ್ನೊಬ್ಬನನ್ನು ಆಯ್ಕೆ ಮಾಡಬಹುದಿತ್ತು. ಶಿಖರ್ ಧವನ್ ಬದಲಿಗೆ ಆಯ್ಕೆಯಾಗಿರುವ ರಿಷಭ್ ಪಂತ್ಗೆ ಅವಕಾಶ ನೀಡಿದ್ದರೆ ಅಫ್ಘಾನಿಸ್ತಾನ ತಂಡಕ್ಕೆ ಬೌಲಿಂಗ್ ಮಾಡುವುದಕ್ಕೆ ಕೊಂಚ ಕಷ್ಟವಾಗಬಹುದಿತ್ತು. ಮೊದಲ ಓವರ್ನಿಂದಲೇ ಒಂದೇ ರೀತಿಯ ಫೀಲ್ಡಿಂಗ್ ಸೆಟ್ ಮಾಡಿಕೊಂಡ ಅಫ್ಘಾನಿಸ್ತಾನ ತಂಡ 50 ನೇ ಓವರ್ ಎಸೆಯುವ ತನಕ ಫೀಲ್ಡಿಂಗ್ನಲ್ಲಿ ಹೆಚ್ಚೇನು ಬದಲಾವಣೆ ಮಾಡಲಿಲ್ಲ.
ರಶೀದ್, ಮುಜೀಬ್, ನಬಿ ಹಾಗೂ ರಹ್ಮತ್ ಶಾ ಬಲಗೈ ಬ್ಯಾಟ್ಸ್ಮನ್ಗಳಿಗೆ ಉತ್ತಮ ಲೈನ್ ಅಂಡ್ ಲೆಂತ್ ಕಾಪಾಡಿಕೊಂಡರಲ್ಲದೇ, ಧೋನಿಯಂಥ ಬಲಿಷ್ಠ ಬ್ಯಾಟ್ಸ್ಮನ್ ಹೊಡೆದ ಹೊಡೆತಗಳೆಲ್ಲಾ 30 ಅಡಿ ವ್ಯಾಪ್ತಿಯಲ್ಲಿ ನಿಂತಿದ್ದ ಫೀಲ್ಡರ್ ಬಿಟ್ಟು ದಾಟದಂತೆ ನೋಡಿಕೊಂಡರು. ಭಾರತ ತಂಡದ ನ್ಯೂನತೆಯನ್ನೇ ಅಸ್ತ್ರವಾಗಿ ಉಪಯೋಗಿಸಿಕೊಂಡ ಅಫ್ಘಾನ್ ತಂಡ 50 ಓವರ್ಗಳಲ್ಲಿ 34 ಓವರ್ಗಳನ್ನು ಸ್ಪಿನ್ ಕೋಟಾದಲ್ಲೇ ಮುಗಿಸಿತು. ಸ್ಪಿನ್ ಬೌಲಿಂಗ್ನಲ್ಲಿ ಬಿಟ್ಟುಕೊಟ್ಟಿದ್ದು, ಕೇವಲ 119 ರನ್ ಮಾತ್ರ. ವೇಗದ ಬೌಲಿಂಗ್ನಲ್ಲಿ 16 ಓವರ್ಗಳಲ್ಲಿ 105 ರನ್ ಬಿಟ್ಟುಕೊಟ್ಟರು.