ದುಬೈ: ಫೆಬ್ರವರಿ 21ರಿಂದ ಮಾರ್ಚ್ 8 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಾಣಗೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇದೀಗ ಮಾಹಿತಿ ರಿವೀಲ್ ಮಾಡಿದೆ.
ಡಿಜಿಟಲ್ ಹಾಗೂ ಬ್ರಾಡ್ಕಾಸ್ಟ್ ವೀಕ್ಷಣೆಯಲ್ಲಿ ಹೊಸ ದಾಖಲೆ ನಿರ್ಮಾಣಗೊಂಡಿದೆ. ಭಾರತದಲ್ಲೇ 9.02 ಮಿಲಿಯನ್ ಜನ ಟೀಂ ಇಂಡಿಯಾ ವಿಶ್ವಕಪ್ನ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಫೈನಲ್ ಪಂದ್ಯ ವೀಕ್ಷಣೆ ಮಾಡಲು 86,174 ಜನರು ಫೈನಲ್ ಪಂದ್ಯ ವೀಕ್ಷಣೆ ಮಾಡಲು ತೆರಳಿದ್ದರು. ಇನ್ನು ವಿಶ್ವದಾದ್ಯಂತ 5.4 ಬಿಲಿಯನ್ ಜನರು ಇದರ ವೀಕ್ಷಣೆ(ವಿಡಿಯೊ) ಮಾಡಿದ್ದಾರೆ.
2019ರ ವಿಶ್ವಕಪ್ ಮುಕ್ತಾಯದ ಬಳಿಕ ಇಷ್ಟೊಂದು ಹೆಚ್ಚಿಗೆ ವಿಡಿಯೋ ವೀಕ್ಷಣೆ ಮಾಡಿರುವುದು ಇದೇ ಟೂರ್ನಿ. 2017ರಲ್ಲಿ ನಡೆದ ಮಹಿಳಾ ವಿಶ್ವಕಪ್ ಕೂಡ ಅತಿ ಹೆಚ್ಚು ಸಲ ವೀಕ್ಷಣೆಯಾಗಿದೆ.
ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಉದರ ಬಗ್ಗೆ ಮಾತನಾಡಿದ್ದು, ಮಹಿಳಾ ಕ್ರಿಕೆಟ್ ಕೂಡ ದಿನಕಳೆದಂತೆ ಫೇಮಸ್ ಆಗುತ್ತಿದೆ ಎಂಬುದಕ್ಕೆ ಈ ಅಂಕಿ-ಸಂಖ್ಯೆಗಳು ಉದಾಹರಣೆ ಎಂದು ಹೇಳಿದ್ದಾರೆ.