ETV Bharat / sports

ಮಹಿಳಾ ಟಿ20 ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತದ ಶೆಫಾಲಿ ವರ್ಮಾ - ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕ

ಬೌಲರ್​ಗಳ ವಿಭಾಗದಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ 12 ಸ್ಥಾನ ಮೇಲೇರಿ 13ನೇ ಶ್ರೇಯಾಂಕ ಪಡೆದಿದ್ದಾರೆ. ದೀಪ್ತಿ ಶರ್ಮಾ ಮತ್ತು ರಾಧ ಯಾದವ್​ 7 ಮತ್ತು 8ರಲ್ಲಿ ಮುಂದುವರಿದಿದ್ದಾರೆ..

ಮಹಿಳಾ ಟಿ20 ರ‍್ಯಾಂಕಿಂಗ್
ಶೆಫಾಲಿ ವರ್ಮಾ
author img

By

Published : Mar 30, 2021, 5:05 PM IST

ದುಬೈ : ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಕೇವಲ 30 ಎಸೆತಗಳಲ್ಲಿ ಆಕರ್ಷಕ 60 ರನ್​ಗಳಿಸಿದ್ದ ಭಾರತದ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಐಸಿಸಿ ಮಂಗಳವಾರ ಬಿಡುಗಡೆ ಮಾಡಿದ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಈ ಪಂದ್ಯದ ನಂತರ ವರ್ಮಾ 26 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದರು. ಇದೀಗ ಅವರು 776 ಅಂಕಗಳನ್ನು ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಬೆತ್ ಮೂನಿ ಅವರಿಗಿಂತ 35 ಅಂಕ ಮುಂದಿದ್ದಾರೆ. ಭಾರತದ ಮತ್ತೊಬ್ಬ ಸ್ಟಾರ್​ ಸ್ಮೃತಿ ಮಂಧಾನ 6ನೇ ಮತ್ತು ಜಮೀಮಾ ರೋಡ್ರಿಗಸ್​ 9ನೇ ಸ್ಥಾನದಲ್ಲಿದ್ದಾರೆ.

ಬೌಲರ್​ಗಳ ವಿಭಾಗದಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ 12 ಸ್ಥಾನ ಮೇಲೇರಿ 13ನೇ ಶ್ರೇಯಾಂಕ ಪಡೆದಿದ್ದಾರೆ. ದೀಪ್ತಿ ಶರ್ಮಾ ಮತ್ತು ರಾಧ ಯಾದವ್​ 7 ಮತ್ತು 8ರಲ್ಲಿ ಮುಂದುವರಿದಿದ್ದಾರೆ.

ಕಿವೀಸ್​ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಜೇಯ73 ರನ್​ಗಳಿಸಿದ್ದ ಆಶ್ಲೀ ಗಾರ್ಡ್ನರ್​ ಜೀವನ ಶ್ರೇಷ್ಠ 11ನೇ ಶ್ರೇಯಾಂಕ ಪಡೆದಿದ್ದಾರೆ. ಜಾರ್ಜಿಯಾ ವಾರೆಹಮ್ ಬೌಲರ್​ಗಳ ಶ್ರೇಯಾಂಕದಲ್ಲಿ ಟಾಪ್ 10ಕ್ಕೆ ಪ್ರವೇಶಿಸಿದ್ದಾರೆ. ಇಂಗ್ಲೆಂಡ್​ನ ಸೋಫಿ ಎಕ್ಲೆಸ್ಟೋನ್​ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದನ್ನು ಓದಿ:2ನೇ ಟಿ20.. ಬಾಂಗ್ಲಾದೇಶವನ್ನು 28ರನ್​ಗಳಿಂದ ಮಣಿಸಿ 2-0ಯಲ್ಲಿ ಸರಣಿ ವಶಪಡಿಸಿಕೊಂಡ ಕಿವೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.