ETV Bharat / sports

ಐಸಿಸಿ ODI ರ‍್ಯಾಂಕಿಂಗ್: 4ನೇ ಸ್ಥಾನದಲ್ಲಿ ಮಂಧಾನ, 10ನೇ ಸ್ಥಾನ ಉಳಿಸಿಕೊಂಡ ಮಿಥಾಲಿ - ದೀಪ್ತಿ ಶರ್ಮಾ

28 ವರ್ಷದ ಆಟಗಾರ್ತಿ ಸರಣಿಯಲ್ಲಿ 163 ರನ್​ ಸಿಡಿಸುವ ಮೂಲಕ 4 ಸ್ಥಾನಕ್ಕೆ ಬಡ್ತಿ ಪಡೆದು ವಿಂಡೀಸ್​ ನಾಯಕಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. 2018ರ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದ್ದಾರೆ. 2014ರಿಂದ 2018 ರವರೆಗೆ 902 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು.

ಐಸಿಸಿ ಏಕದಿನ ರ‍್ಯಾಂಕಿಂಗ್
ಐಸಿಸಿ ಏಕದಿನ ರ‍್ಯಾಂಕಿಂಗ್
author img

By

Published : Oct 8, 2020, 5:40 PM IST

ದುಬೈ: ಕೋವಿಡ್‌ನಿಂದ ಕಳೆದ ಕೆಲವು ತಿಂಗಳಿನಿಂದ ಕ್ರಿಕೆಟ್ ಆಡದ ಕಾರಣ ಭಾರತ ತಂಡದ ಸ್ಟಾರ್​ ಬ್ಯಾಟರ್​ ಸ್ಮೃತಿ ಮಂಧಾನ ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನದಲ್ಲಿದ್ದರೆ, ನಾಯಕಿ ಮಿಥಾಲಿ ರಾಜ್ 10ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಿಥಾಲಿ ರಾಜ್​
ಮಿಥಾಲಿ ರಾಜ್​

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಏಕದಿನ ಸರಣಿ ಮುಗಿದ ನಂತರ ಐಸಿಸಿ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡವನ್ನು 3-0 ಪಾಯಿಂಟುಗಳಲ್ಲಿ ವೈಟ್‌ವಾಶ್ ಮಾಡುವನಲ್ಲಿ ಪ್ರಮುಖ ಪಾತ್ರ ವಹಿಸಿದ ಲ್ಯಾನಿಂಗ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪುನಃ ಪಡೆದುಕೊಂಡಿದ್ದಾರೆ.

28 ವರ್ಷದ ಆಟಗಾರ್ತಿ ಸರಣಿಯಲ್ಲಿ 163 ರನ್​ ಸಿಡಿಸುವ ಮೂಲಕ 4 ಸ್ಥಾನಕ್ಕೆ ಬಡ್ತಿ ಪಡೆದು ವಿಂಡೀಸ್​ ನಾಯಕಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. 2018ರ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದ್ದಾರೆ. 2014ರಿಂದ 2018ರ ವರೆಗೆ 902 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು.

ಬೌಲರ್ಸ್ ಶ್ರೇಯಾಂಕದಲ್ಲಿ ಜೂಲಾನ್ ಗೋಸ್ವಾಮಿ 5 ನೇ ಸ್ಥಾನ ಪಡೆಯುವ ಮೂಲಕ ಭಾರತದ ಗರಿಷ್ಠ ಶ್ರೇಯಾಂಕ ಪಡೆದವರಾಗಿದ್ದಾರೆ. ಇವರ ನಂತರದಲ್ಲಿ ಪೂನಮ್ ಯಾದವ್​(6), ಶಿಖಾ ಪಾಂಡೆ(7), ದೀಪ್ತಿ ಶರ್ಮಾ 10 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್​ ಜೆಸ್ ಜೊನಾಸೆನ್​ ಅಗ್ರಸ್ಥಾನದಲ್ಲಿ ಇದ್ದಾರೆ.

ಆಲ್​ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ಮತ್ತು ಶಿಖಾ ಕ್ರಮವಾಗಿ 4 ಮತ್ತು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ತಂಡದ ವಿಭಾಗದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.