ಲಾರ್ಡ್ಸ್: ಪಾಕಿಸ್ತಾನ ವಿರುದ್ಧ ಕಳಪೆ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ 49 ರನ್ಗಳಿಂದ ಸೋಲನುಭವಿಸಿ ಸೆಮಿಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದಲ್ಲದೆ 2003ರ ಬಳಿಕೆ ಮೊದಲ ಬಾರಿಗೆ ಲೀಗ್ನಲ್ಲೇ ಹೊರಬಿದ್ದ ಅಪಮಾನಕ್ಕೆ ತುತ್ತಾಗಿದೆ.
ಪಾಕಿಸ್ತಾನ ನೀಡಿದ್ದ 309 ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 259 ರನ್ಗಳಿಗೆ ಆಲೌಟ್ ಆಗುವ ಮೂಲಕ 49 ರನ್ಗಳಿಂದ ಸೋಲೊಪ್ಪಿಕೊಂಡಿತು.
309 ರನ್ಗಳ ಬೃಹತ್ ಗುರಿ ಪಡೆದಿದ್ದ ಆಫ್ರಿಕಾ ಎರಡನೇ ಓವರ್ನಲ್ಲೇ ಹಾಶಿಮ್ ಆಮ್ಲ(2) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಂತರ ಡಿಕಾಕ್ ಜೊತೆಗೂಡಿದ ಪ್ಲೆಸಿಸ್ 2ನೇ ವಿಕೆಟ್ ಜೊತೆಯಾಟದಲ್ಲಿ 87 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡದರು. ಈ ಹಂತದಲ್ಲಿ 60 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 47 ರನ್ಗಳಿಸಿದ್ದ ಡಿಕಾಕ್, ಶದಾಬ್ ಖಾನ್ಗೆ ವಿಕೆಟ್ ಒಪ್ಪಿಸಿದರೆ, ಮ್ಯಾರ್ಕ್ರಮ್(7) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
-
Pakistan win by 49 runs!
— ICC (@ICC) June 23, 2019 " class="align-text-top noRightClick twitterSection" data="
A superb team performance 👏 #CWC19 | #WeHaveWeWill pic.twitter.com/3mOW1QMirc
">Pakistan win by 49 runs!
— ICC (@ICC) June 23, 2019
A superb team performance 👏 #CWC19 | #WeHaveWeWill pic.twitter.com/3mOW1QMircPakistan win by 49 runs!
— ICC (@ICC) June 23, 2019
A superb team performance 👏 #CWC19 | #WeHaveWeWill pic.twitter.com/3mOW1QMirc
79 ಎಸೆತಗಳಲ್ಲಿ 5 ಬೌಂಡರಿ ಸಹಿತ 63 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಪ್ಲೆಸಿಸ್ ಅಮೀರ್ ಬೌಲಿಂಗ್ ನಲ್ಲಿ ಔಟಾದರು. ಫ್ಲೆಸಿಸ್ ಔಟಾಗುತ್ತಿದ್ದ ದಕ್ಷಿಣ ಆಫ್ರಿಕಾದ ರನ್ಗತಿ ಇಳಿಮುಖವಾಗುವುದರ ಜೊತೆಗೆ ನಿರಂತರವಾಗಿ ವಿಕೆಟ್ ಕೂಡ ಕಳೆದುಕೊಂಡಿತು. ಡಾಸ್ಸೆನ್ 36, ಮಿಲ್ಲರ್ 31 ಹಾಗೂ ಪೆಹ್ಲುಕ್ವಾಯೋ ಔಟಾಗದೆ 46 ರನ್ಗಳಿಸಲಷ್ಟೇ ಕೊಂಚ ಪ್ರತಿರೋದ ನೀಡಿದರಾದರೂ ದೊಡ್ಡ ಮೊತ್ತಗಳಿಸಲು ವಿಫಲರಾದರು. ಬಾಲಂಗೋಚಿಗಳಾದ ಮೋರಿಸ್ 16, ರಬಾಡ 3, ಎನ್ಗಿಡಿ 1 ರನ್ಗಳಿಸಿ ಔಟಾದರು.
ಪಾಕಿಸ್ತಾನದ ಪರ ಅಮೀರ್ 2, ಶದಾಬ್ ಖಾನ್ 3 ಹಾಗೂ ವಹಾಬ್ ರಿಯಾಜ್ 3 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು 259 ರನ್ಗಳಿಗೆ ಆಲೌಟ್ ಮಾಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಂ 69, ಹ್ಯಾರೀಸ್ ಸೋಹೈಲ್ 89, ಇಮಾಮ್ ಹಲ್ ಹಕ್ 44, ಫಖರ್ ಜಮಾನ್ 44 ರನ್ಗಳಿಂದ 50 ಓವರ್ಗಳಲ್ಲಿ 308 ರನ್ಗಳಿಸಿತ್ತು.
ಈ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನದ ನಂತರ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.