ಬೆನೋನಿ (ದಕ್ಷಿಣ ಆಫ್ರಿಕಾ): ನಿನ್ನೆ ಐಸಿಸಿ ಅಂಡರ್ 19 ವಿಶ್ವಕಪ್‌ನ 2ನೇ ಕ್ವಾರ್ಟರ್ ಫೈನಲ್ ಪಂದ್ಯ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ನಡೆಯಿತು. ಈ ಪಂದ್ಯದ ವೇಳೆ ಅಪರೂಪದ ಮಾನವೀಯ ಘಟನೆಯೊಂದು ನಡೆದಿದೆ.
-
An outstanding show of sportsmanship earlier today in the game between West Indies and New Zealand 👏 #U19CWC | #SpiritOfCricket | #FutureStars pic.twitter.com/UAl1G37pKj
— Cricket World Cup (@cricketworldcup) January 29, 2020 " class="align-text-top noRightClick twitterSection" data="
">An outstanding show of sportsmanship earlier today in the game between West Indies and New Zealand 👏 #U19CWC | #SpiritOfCricket | #FutureStars pic.twitter.com/UAl1G37pKj
— Cricket World Cup (@cricketworldcup) January 29, 2020An outstanding show of sportsmanship earlier today in the game between West Indies and New Zealand 👏 #U19CWC | #SpiritOfCricket | #FutureStars pic.twitter.com/UAl1G37pKj
— Cricket World Cup (@cricketworldcup) January 29, 2020
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 47.5 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿತು. ಕೊನೆಯ ವಿಕೆಟ್ ನೀಡಿದ ಶತಕ ವಂಚಿತ ಆಟಗಾರ ಕಿರ್ಕ್ ಮೆಕೆಂಜಿ ಪಂದ್ಯದದ ವೇಳೆ ಗಾಯಗೊಂಡಿದ್ದರು. ತೀವ್ರ ಸ್ವರೂಪದ ಗಾಯದಿಂದಾಗಿ ಅವರಿಗೆ ನಡೆದಾಡಲು ಕಷ್ಟವಾಗಿತ್ತು. ಈ ವೇಳೆ ನ್ಯೂಜಿಲ್ಯಾಂಡ್ ತಂಡದ ಇಬ್ಬರು ಆಟಗಾರರು ಕಿರ್ಕ್ ಮೆಕೆಂಜಿಯವರನ್ನು ಪೆವಿಲಿಯನ್‌ನತ್ತ ಹೊತ್ತು ಸಾಗಿದರು.
ಕಿವಿಸ್ ತಂಡದ ಕ್ರೀಡಾ ಸ್ಪೂರ್ತಿ ನೋಡಿದ ನೆಟ್ಟಿಗರು ಸಖತ್ ಫಿದಾ ಆಗಿದ್ದು, ಶಹಬ್ಬಾಸ್ ಎನ್ನುತ್ತಿದ್ದಾರೆ.
ಕ್ರಿಸ್ಟಿಯನ್ ಕ್ಲಾರ್ಕ್ ಆಲ್ರೌಂಡ್ ಪ್ರದರ್ಶನದೊಂದಿಗೆ ನ್ಯೂಜಿಲೆಂಡ್ ತಂಡ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತ ತಲುಪಿದೆ.