ಪೊಚೆಫ್‌ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಇಲ್ಲಿನ ಸೆಡ್ಗರ್ಸ್ ಪಾರ್ಕ್ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಸೋಲಿಸಿದ ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ.
-
Re-live the special moment when Bangladesh qualified for their first ever #U19CWC final 👇 #NZvBAN | #FutureStars pic.twitter.com/9djn09Q2Nm
— Cricket World Cup (@cricketworldcup) February 6, 2020 " class="align-text-top noRightClick twitterSection" data="
">Re-live the special moment when Bangladesh qualified for their first ever #U19CWC final 👇 #NZvBAN | #FutureStars pic.twitter.com/9djn09Q2Nm
— Cricket World Cup (@cricketworldcup) February 6, 2020Re-live the special moment when Bangladesh qualified for their first ever #U19CWC final 👇 #NZvBAN | #FutureStars pic.twitter.com/9djn09Q2Nm
— Cricket World Cup (@cricketworldcup) February 6, 2020
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತ್ತು. ಕಿವಿಸ್ ಪರ ಬೆಕ್ಹ್ಯಾಮ್ ವೀಲರ್-ಗ್ರೀನಲ್ ಅಜೆಯ 75, ನಿಕೋಲಸ್ ಲಿಡ್ಸ್ಟೋನ್ 44, ಫರ್ಗುಸ್ ಲೆಲ್ಮನ್ 24 ರನ್ಗಳಿಸಿದ್ರು. ಬಾಂಗ್ಲಾ ಪರ ಉತ್ತಮ, ಬೌಲಿಂಗ್ ಪ್ರದರ್ಶಿಸಿದ ಶೋರಿಫುಲ್ ಇಸ್ಲಾಂ 3 ವಿಕೆಟ್, ಶಮಿಮ್ ಹೊಸೈನ್ 2, ಹಸನ್ ಮುರದ್ 2 ವಿಕೆಟ್ ಪಡೆದು ಮಿಂಚಿದ್ರು.
212 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಕಿವೀಸ್ ಬೌಲರ್ಗಳು ಶಾಕ್ ನೀಡಿದ್ರು. ಆರಂಭಿಕ ಆಟಗಾರರು ತಂಡದ ಮೊತ್ತ 32 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಜೊತೆಯಾದ ಮಹಮುದುಲ್ ಹಸನ್ ಜಾಯ್ ಮತ್ತು ಟೌಹಿಡ್ ಹ್ರೀಡಾಯ್(40) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ರು.
-
Mahmudul Hasan Joy became the first player not from India to score a #U19CWC semi-final 💯 today 💪 #NZvBAN | #FutureStars pic.twitter.com/VaNm9TET1o
— Cricket World Cup (@cricketworldcup) February 6, 2020 " class="align-text-top noRightClick twitterSection" data="
">Mahmudul Hasan Joy became the first player not from India to score a #U19CWC semi-final 💯 today 💪 #NZvBAN | #FutureStars pic.twitter.com/VaNm9TET1o
— Cricket World Cup (@cricketworldcup) February 6, 2020Mahmudul Hasan Joy became the first player not from India to score a #U19CWC semi-final 💯 today 💪 #NZvBAN | #FutureStars pic.twitter.com/VaNm9TET1o
— Cricket World Cup (@cricketworldcup) February 6, 2020
ಮಹಮುದುಲ್ ಹಸನ್ ಜಾಯ್ ಆಕರ್ಶಕ ಶತಕ ಸಿಡಿಸಿ ಮಿಂಚಿದ್ರೆ, ಶಹದತ್ ಹೊಸೈನ್ 40 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ರು. ಅಂತಿಮವಾಗಿ ಬಾಂಗ್ಲಾ ತಂಡ 44.1 ಓವರ್ಗಳಲ್ಲಿ 215 ರನ್ಗಳಿಸುವ ಮೂಲಕ ಗೆದ್ದು ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ನ್ಯೂಜಿಲ್ಯಾಂಡ್ ತಂಡದ ಪರ ಕ್ರಿಸ್ಟಿಯನ್ ಕ್ಲಾರ್ಕ್, ಡೇವಿಡ್ ಹ್ಯಾನ್ಕಾಕ್, ಆದಿತ್ಯ ಅಶೋಕ್ ಮತ್ತು ಜೆಸ್ಸಿ ತಾಶ್ಕಾಫ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಈಗಾಗಲೇ ಭಾರತ ಅಂಡರ್ -19 ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿಶ್ವಕಪ್ ಕಿರೀಟಕ್ಕಾಗಿ ಕಾದಾಟ ನಡೆಸಲಿವೆ.