ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಟಿ20 ವಿಶ್ವಕಪ್ ಬಗ್ಗೆ ಐಸಿಸಿ ನಿರ್ಧಾರದ ಬಗ್ಗೆ ಎದುರು ನೋಡುತ್ತಿದ್ದರ, ಇತ್ತ ಐಸಿಸಿ ಕೊರೊನಾ ವೈರಸ್ ಭೀತಿಯಿಂದ ರದ್ದಾಗಿರುವ ಹಾಗೂ ಮುಂದೂಡಲ್ಪಟ್ಟಿರುವ ಚೊಚ್ಚಲ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ ಮರು ವೇಳಾಪಟ್ಟಿ ರಚಿಸಲು ಮುಂದಾಗಿದೆ.
ಐಯಾನಸ್ ಜೊತೆ ಮಾತನಾಡಿದ ಐಸಿಸಿ ಅಧಿಕಾರಿಯೊಬ್ಬರು, ಪ್ರ4ಸ್ತುತ ಸನ್ನಿವೇಶಗವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಪ್ರವಾಸಗಳ ಬಗ್ಗೆ ಕೆಲಸ ಮಾಡಬೇಕಿದೆ. ಈ ಸನ್ನಿವೇಶದಲ್ಲಿ ದ್ವಿಪಕ್ಷೀಯ ಸರಣಿಗಳ ಮೇಲಿನ ಬದ್ದತೆಗಳನ್ನು ಗೌರವ ಕೊಡುವುದು ಅಸಾಧ್ಯವಾಗಿದೆ. ಸಾಂಕ್ರಾಮಿಕ ರೋಗ ಎಫ್ಟಿಪಿ( FTP Future Tours Programme) ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಅರ್ಥಮಾಡಿಕೊಂಡ ನಹಂತರವಷ್ಟೇ ಆಲೋಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
" ಈ ಹಂತದೆಲ್ಲಿ ಎಲ್ಲವೂ ಬವದಲಾಗಿದೆ. ನಾವು ಈ ಸಂದ್ರಭದಲ್ಲಿ ಎಷ್ಟು ಕ್ರಿಕೆಟ್ ಕಳೆದುಹೋಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಟಿ20 ವಿಶ್ವಕಪ್ಅನ್ನು ಯಾವಾಗ ನಡೆಸಬೇಕು. ಭವಿಷ್ಯದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ 19 ನಿಂದ ಮುಂದೂಡಲ್ಪಟ್ಟಿರುವ ಸರಣಿಗಳನ್ನು ಸಾಧ್ಯವಾದಷ್ಟು ಮರುವೇಳಾಪಟ್ಟಿ ರಚಿಸಬೇಕಿದೆ. 2023ರ ವರೆಗಿನ ವೇಳಾಪಟ್ಟಿಯನ್ನು ಪರಿಶೀಲಿಸಬೇಕಾಗಿದೆ.
![World Test Championship](https://etvbharatimages.akamaized.net/etvbharat/prod-images/4a386-15813416753827-800_2906newsroom_1593421790_685.jpg)
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಎರಡರ ಭವಿಷ್ಯದ ಕುರಿತು ಚರ್ಚೆ ಹಾಗೂ ನಿರ್ಧಾರವನ್ನು ನಂತರದ ದಿನಗಳಲ್ಲಿ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ."
ಇತ್ತೀಚಿ ಐಸಿಸಿ ಸಭೆಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿಯಿಂದ ಟೆಸ್ಟ್ ಪಂದ್ಯಗಳನ್ನು ರದ್ದುಗೊಳಿಸುವ ಮಾತುಕತೆ ನಡೆಯುತ್ತಿದೆ. ಆದರೆ ಇದರಿಂದ ಟೆಸ್ಟ್ ಚಾಂಪಿಯನ್ಶಿಪ್ನ ಮೇಲೆ ಪರಿಣಾಮ ಬೀರುತ್ತದೆ ಎಂದು ಐಸಿಸಿ ಸದಸ್ಯರು ಖಚಿತಪಡಿಸಿದ್ದಾರೆ. ಆದರೆ ಕ್ಯಾಲೆಂಡರ್ ಮರು ಜೋಡಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸಾಕಷ್ಟು ಸಮಯ ತೆಗತೆದುಕೊಳ್ಳುತ್ತದೆ ಎಂದು ಎಂದಿದ್ದಾರೆ.
ಇನ್ನು ಸಾಂಕ್ರಾಮಿಕದಿಂದ ತಪ್ಪಿರುವ ಪಂದ್ಯಗಳನ್ನು ಮರು ವೇಳಾಪಟ್ಟಿ ರಚಿಸಲಿದೆಯೇ ಅಥವಾ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ ಮಾಡಲಿದಿಯಾ ಎಂಬುದು ಅಕ್ಟೋಬರ್ ವೇಳೆಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಮೂಲ ಯೋಜನೆಯಿಂದ ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ. ಕೊರೊನಾ ಸಾಂಕ್ರಾರಮಿಕ ರೋಗ ಆಟವನ್ನು ನೋಯಿಸಿದೆ. ಇಲ್ಲಿ ಯಾರನ್ನು ದೂರಲು ಸಾಧ್ಯವಿಲ್ಲ. ಈ ಕುರಿತು ಯಾವುದೇ ನಿರ್ಧಾರವಿರಲಿ ಮಂಡಳಿಯ ಸದಸ್ಯರು ಒಟ್ಟಿಗೆ ನಿರ್ದಾರ ತೆಗದುಕೊಳ್ಳಬೇಕಾಗುತ್ತದೆ. ಇದಕ್ಕಾ ಕೆಲವು ತಿಂಗಳುಗಳೇ ಬೇಕಾಗಲಿದೆ ಎಂದು ಅವರು ತಿಳಿಸಿದ್ದಾರೆ.