ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನವನ್ನು ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ.
ಈ ಸರಣಿಗೂ ಮುನ್ನ 4ನೇ ಸ್ಥಾನದಲ್ಲಿದ್ದ ಅವರು ದ್ವಿಶತಕ ಸಿಡಿಸಿದ ನಂತರ 79 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಈ ಮೊದಲು ಅವರು 812 ಅಂಕ ಹೊಂದಿದ್ದರು. ಇದೀಗ ಅವರ ರೇಟಿಂಗ್ 886ಕ್ಕೇರಿದ್ದು, ಇಷ್ಟೇ ಅಂಕ ಹೊಂದಿರುವ ಕೊಹ್ಲಿ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. 911 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
-
💥 Kane Williamson joins Virat Kohli at No.2
— ICC (@ICC) December 7, 2020 " class="align-text-top noRightClick twitterSection" data="
💥 Tom Latham enters 🔝 10
After the conclusion of the first #NZvWI Test, top performers from New Zealand and West Indies sizzle in the latest @MRFWorldwide ICC Test Rankings for batting 🙌
Full list: https://t.co/OMjjVwOboH pic.twitter.com/06GJGWjDBT
">💥 Kane Williamson joins Virat Kohli at No.2
— ICC (@ICC) December 7, 2020
💥 Tom Latham enters 🔝 10
After the conclusion of the first #NZvWI Test, top performers from New Zealand and West Indies sizzle in the latest @MRFWorldwide ICC Test Rankings for batting 🙌
Full list: https://t.co/OMjjVwOboH pic.twitter.com/06GJGWjDBT💥 Kane Williamson joins Virat Kohli at No.2
— ICC (@ICC) December 7, 2020
💥 Tom Latham enters 🔝 10
After the conclusion of the first #NZvWI Test, top performers from New Zealand and West Indies sizzle in the latest @MRFWorldwide ICC Test Rankings for batting 🙌
Full list: https://t.co/OMjjVwOboH pic.twitter.com/06GJGWjDBT
86 ರನ್ ಸಿಡಿಸಿದ್ದ ಟಾಮ್ ಲಾಥಮ್ 733 ಅಂಕಗಳೊಂದಿದೆ 10ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿ ಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್ ಆಗಿದೆ. ಶತಕ ಸಿಡಿಸಿದ ವೆಸ್ಟ್ ಇಂಡೀಸ್ ತಂಡದ ಜರ್ಮೈನ್ ಬ್ಲಾಕ್ವುಡ್ 17 ಸ್ಥಾನ ಏರಿಕೆ ಕಂಡಿದ್ದು, 41ನೇ ಸ್ಥಾನ ಪಡೆದಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾ ನೆಲದಲ್ಲಿ ಕ್ರಿಕೆಟ್ನ 3 ಮಾದರಿಯಲ್ಲೂ ಸರಣಿ ಗೆದ್ದ 2ನೇ ನಾಯಕ ಕೊಹ್ಲಿ
ಬೌಲರ್ಗಳ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ 6 ವಿಕೆಟ್ ಪಡೆದ ನೈಲ್ ವ್ಯಾಗ್ನರ್ ಸ್ಟುವರ್ಟ್ ಬ್ರಾಡ್ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಟಿಮ್ ಸೌಥಿ 817 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ 5ರಿಂದ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸೀಸ್ನ ಪ್ಯಾಟ್ ಕಮಿನ್ಸ್ 904 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
-
🇳🇿 Neil Wagner moves up to No.2
— ICC (@ICC) December 7, 2020 " class="align-text-top noRightClick twitterSection" data="
🌴 Jason Holder slips two spots to No.7
The latest @MRFWorldwide ICC Test Rankings for bowlers 👉 https://t.co/OMjjVwOboH pic.twitter.com/tAo40viLZ6
">🇳🇿 Neil Wagner moves up to No.2
— ICC (@ICC) December 7, 2020
🌴 Jason Holder slips two spots to No.7
The latest @MRFWorldwide ICC Test Rankings for bowlers 👉 https://t.co/OMjjVwOboH pic.twitter.com/tAo40viLZ6🇳🇿 Neil Wagner moves up to No.2
— ICC (@ICC) December 7, 2020
🌴 Jason Holder slips two spots to No.7
The latest @MRFWorldwide ICC Test Rankings for bowlers 👉 https://t.co/OMjjVwOboH pic.twitter.com/tAo40viLZ6
ಆಲ್ರೌಂಡರ್ ಶ್ರೇಯಾಂಕದಲ್ಲೂ ಹೋಲ್ಡರ್ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಇವರಿಗಿಂತ 12 ಅಂಕ ಹೆಚ್ಚಿರುವ ಬೆನ್ ಸ್ಟೋಕ್ಸ್ ಅಗ್ರಸ್ಥಾನಕ್ಕೇರಿದ್ದಾರೆ.