ETV Bharat / sports

ಐಸಿಸಿ ಟೆಸ್ಟ್​ ಶ್ರೇಯಾಂಕ.. ಮೂರಕ್ಕಿಳಿದ ಕಿಂಗ್​ ಕೊಹ್ಲಿ.. ಆರಕ್ಕೇರಿದ ಬೆನ್ ಸ್ಟೋಕ್ಸ್.. - ವಿರಾಟ್ ಕೊಹ್ಲಿ

ಭಾರತದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆರನೇ ಸ್ಥಾನದಲ್ಲಿದ್ದ ಅಜಿಂಕ್ಯ ರಹಾನೆ ಒಂದು ಸ್ಥಾನ ಕಳೆದುಕೊಂಡು ಈಗ ಏಳನೇ ಸ್ಥಾನದಲ್ಲಿದ್ದಾರೆ..

virat kohli
ವಿರಾಟ್ ಕೊಹ್ಲಿ
author img

By

Published : Jan 12, 2021, 12:14 PM IST

ಹೈದರಾಬಾದ್ : ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಸಿಡ್ನಿ ಟೆಸ್ಟ್ ನಂತರ ಐಸಿಸಿ ಇತ್ತೀಚಿನ ಟೆಸ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ನಂಬರ್-1 ಸ್ಥಾನದಲ್ಲಿದ್ರೆ, ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮ್ಮಿನ್ಸ್ ಪ್ರಥಮ ಸ್ಥಾನದಲ್ಲಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆರನೇ ಸ್ಥಾನದಲ್ಲಿದ್ದ ಅಜಿಂಕ್ಯ ರಹಾನೆ ಒಂದು ಸ್ಥಾನ ಕಳೆದುಕೊಂಡು ಈಗ ಏಳನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್​ ತಂಡದ ಆಲ್​ ರೌಂಡರ್​ ಬೆನ್ ಸ್ಟೋಕ್ಸ್ 6ನೇ ಸ್ಥಾನಕ್ಕೇರಿದ್ದಾರೆ. ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕೂಡ 10ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಓದಿ : ವಿರುಷ್ಕಾ ಮಗಳ ಮೊದಲ ಫೋಟೋ ಹಂಚಿಕೊಂಡ ವಿರಾಟ್​ ಸಹೋದರ

ಬೌಲರ್‌ಗಳ ಪಟ್ಟಿಯಲ್ಲಿ ಜೋಶ್ ಹ್ಯಾಜಲ್‌ವುಡ್ 8ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ್ದಾರೆ. ಜೇಮ್ಸ್ ಆಂಡರ್ಸನ್ 7ನೇ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾದ ಪೇಸರ್ ಮಿಚೆಲ್ ಸ್ಟಾರ್ಕ್ 3 ಸ್ಥಾನ ಕೆಳಗಿಳಿದಿದ್ದಾರೆ. ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ 9ನೇ ಮತ್ತು 10ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.