ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಆಸೀಸ್ನ ಯುವ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಬುಧವಾರ ಬಿಡುಗಡೆಯಾದ ನೂತನ ಐಸಿಸಿ ಶ್ರೇಯಾಂಕದಲ್ಲಿ ಕೊಹ್ಲಿ 928 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, 911 ಸ್ಮಿತ್ ಎರಡನೇ ಸ್ಥಾನದಲ್ಲಿ ಅಬಾಧಿತರಾಗಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಒಂದು ಸ್ಥಾನ ಬಡ್ತಿ ಪಡೆಯುವ ಮೂಲಕ ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ.
-
Fast bowlers Mitchell Starc and James Anderson make significant gains in the latest @MRFWorldwide ICC Men's Test Player Rankings for bowlers 🙌
— ICC (@ICC) January 8, 2020 " class="align-text-top noRightClick twitterSection" data="
Full rankings: https://t.co/OMjjVwOboH pic.twitter.com/sbBsi1wBYZ
">Fast bowlers Mitchell Starc and James Anderson make significant gains in the latest @MRFWorldwide ICC Men's Test Player Rankings for bowlers 🙌
— ICC (@ICC) January 8, 2020
Full rankings: https://t.co/OMjjVwOboH pic.twitter.com/sbBsi1wBYZFast bowlers Mitchell Starc and James Anderson make significant gains in the latest @MRFWorldwide ICC Men's Test Player Rankings for bowlers 🙌
— ICC (@ICC) January 8, 2020
Full rankings: https://t.co/OMjjVwOboH pic.twitter.com/sbBsi1wBYZ
ಪಂದ್ಯದಿಂದ ಪಂದ್ಯಕ್ಕೆ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಾಣುತ್ತಿರುವ ಲಾಬುಶೇನ್ ಒಂದೇ ವರ್ಷದಲ್ಲಿ 82 ರ್ಯಾಂಕ್ನಿಂದ 8 ಪಂದ್ಯಗಳ ಅಂತರದಲ್ಲಿ 3 ನೇ ಸ್ಥಾನಕ್ಕೇರಿದ್ದಾರೆ. ಮುಂದಿನ ದಿನಗಳಲ್ಲಿ ಕೊಹ್ಲಿ ಹಾಗೂ ಸ್ಟಿವ್ ಸ್ಮಿತ್ರನ್ನು ಹಿಂದಿಕ್ಕಿದರೂ ಆಶ್ಚರ್ಯ ಪಡಬೇಕಾಗಿಲ್ಲ.
ಇನ್ನು ಕಿವೀಶ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ ಡೇವಿಡ್ ವಾರ್ನರ್ 2 ಸ್ಥಾನ ಮೇಲೇರಿದ್ದು 5 ನೇಸ್ಥಾನ ಪಡೆದರೆ, ಇಂಗ್ಲೆಂಡ್ನ ಬೆನ್ಸ್ಟೋಕ್ಸ್ 10 ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಪೂಜಾರ(6) ಬಾಬರ್ ಅಜಮ್(7), ರೂಟ್(8), ರಹಾನೆ(9) ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಪ್ಯಾಟ್ ಕಮ್ಮಿನ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಿವೀಸ್ನ ವ್ಯಾಗ್ನರ್(2), ವಿಂಡೀಸ್ನ ಹೋಲ್ಡರ್(3), ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ(4) ಮಿಚೆಲ್ ಸ್ಟಾರ್ಕ್(5) ಬುಮ್ರಾ(6)ನೇ ಸ್ಥಾನದಲ್ಲಿದ್ದಾರೆ.