ಅಹ್ಮದಾಬಾದ್: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಸುಚಿನ್ ಎಂದು ಉಚ್ಚಾರ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಐಸಿಸಿ ಟ್ವೀಟ್ ಮೂಲಕ ಕಾಲೆಳೆದಿದೆ.
ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಸರಾಗಿರುವ ಮೊಟೇರಾ ಸ್ಟೇಡಿಯಂ ಅನ್ನು ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಘಾಟನೆ ಮಾಡಿದ್ದರು. ಆದರೆ ತಮ್ಮ ಸುದೀರ್ಘ ಭಾಷಣದ ನಡುವೆ ಭಾರತದ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಹೆಸರನ್ನು ಹೇಳುವಾಗ ಟ್ರಂಪ್ ತಡಬಡಾಯಿಸಿದ್ದಾರೆ. ಅಲ್ಲದೆ ಸಚಿನ್ ಹೆಸರನ್ನು ಸುಚಿನ್ ಎಂದು ಉಚ್ಛಾರ ಮಾಡಿರುವುದು ಇಂಟರ್ನೆಟ್ನಲ್ಲಿ ಭಾರಿ ಟ್ರೋಲ್ಗೊಳಗಾಗಿದೆ.
-
Sach-
— ICC (@ICC) February 24, 2020 " class="align-text-top noRightClick twitterSection" data="
Such-
Satch-
Sutch-
Sooch-
Anyone know? pic.twitter.com/nkD1ynQXmF
">Sach-
— ICC (@ICC) February 24, 2020
Such-
Satch-
Sutch-
Sooch-
Anyone know? pic.twitter.com/nkD1ynQXmFSach-
— ICC (@ICC) February 24, 2020
Such-
Satch-
Sutch-
Sooch-
Anyone know? pic.twitter.com/nkD1ynQXmF
ಸ್ತತಃ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನ್ನ ಅಧಿಕೃತ ಟ್ವಿಟರ್ನಲ್ಲಿ ಸಚಿನ್ ತೆಂಡೂಲ್ಕರ್ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ತೆಂಡೂಲ್ಕರ್ ಹಿಂದೆ ಸಚಿನ್ ತಗೆದು ಸುಚಿನ್ ಸೇರಿಸಿ ಸೇವ್ ಮಾಡುತ್ತಿರವ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಅದರ ಜೊತೆಗೆ Sach-, Such-, Satch-, Sutch- Sooch- anyone Know? " ಎಂದು ಬರದುಕೊಂಡು ಪೋಸ್ಟ್ ಮಾಡಿದೆ.
-
FFS, @piersmorgan, pls ask your mate to do some research in pronouncing legends names?! https://t.co/eUGuCNReaM
— Kevin Pietersen🦏 (@KP24) February 24, 2020 " class="align-text-top noRightClick twitterSection" data="
">FFS, @piersmorgan, pls ask your mate to do some research in pronouncing legends names?! https://t.co/eUGuCNReaM
— Kevin Pietersen🦏 (@KP24) February 24, 2020FFS, @piersmorgan, pls ask your mate to do some research in pronouncing legends names?! https://t.co/eUGuCNReaM
— Kevin Pietersen🦏 (@KP24) February 24, 2020
ಐಸಿಸಿ ಅಷ್ಟೇ ಅಲ್ಲದೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಬ್ರಿಟೀಷ್ ಜರ್ನಲಿಸ್ಟ್ ಪಿಯರ್ಸ್ ಮಾರ್ಗನ್ ಅವರಿಗೆ ಟ್ಯಾಗ್ ಮಾಡಿ, ದಯವಿಟ್ಟು ದಿಗ್ಗಜರ ಹೆಸರನ್ನು ಹೇಗೆ ಉಚ್ಚಾರ ಮಾಡಬೇಕೆಂದು ನಿಮ್ಮ ಸಹಪಾಠಿಗಳಿಗೆ ರೀಸರ್ಚ್ ಮಾಡಲು ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.
" ಈ ದೇಶದ ಜನಸಾಮಾನ್ಯರು ಕ್ರಿಕೆಟ್ ದಿಗ್ಗಜರನ್ನು ಹುರಿದುಂಬಿಸುತ್ತಾರೆ. ಸಚಿನ್ ತೆಂಡೂಲ್ಕರ್‌ರಿಂದ ವಿರಾಟ್ ಕೊಹ್ಲಿವರೆಗೆ ಇಲ್ಲಿನ ಕ್ರಿಕೆಟಿಗರು ವಿಶ್ವಶ್ರೇಷ್ಠರಾಗಿದ್ದಾರೆ" ಎಂದು ಟ್ರಂಪ್ 'ನಮಸ್ತೆ ಟ್ರಂಪ್" ಕಾರ್ಯಕ್ರಮದಲ್ಲಿ ಹೇಳಿದ್ದಾರೆ.