ದುಬೈ: ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಯುಎಇ ಕ್ರಿಕೆಟಿಗರಾದ ಅಮೀರ್ ಹಯಾತ್ ಮತ್ತು ಆಶ್ಫಾಕ್ ಅಹ್ಮದ್ ಅವರನ್ನು ಐಸಿಸಿ ತಾತ್ಕಾಲಿಕವಾಗಿ ಆಮಾನತುಗೊಳಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆರಂಭಿಕ ಆಟಗಾರ ಅಶ್ಫಾಕ್ ಅವರನ್ನು ಅಮಾನತುಗೊಳಿಸಿತ್ತು. ಆದರೆ ತನಿಖೆ ಮುಗಿಯಲು ಕಾಯುತ್ತಿದ್ದ ಕಾರಣ ಯಾವುದೇ ಔಪಚಾರಿಕ ಆರೋಪವನ್ನು ದಾಖಲಿಸಿರಲಿಲ್ಲ.
38 ವರ್ಷದ ಮಧ್ಯಮ ವೇಗಿ ಹಯಾತ್ ಯುಎಇ ಪರ 9 ಏಕದಿ ಹಾಗೂ 4 ಟಿ20 ಪಂದ್ಯಗಳನ್ನಾಡಿದ್ದಾರೆ. 35 ವರ್ಷದ ಅಶ್ಫಾಕ್ 16 ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಲು ಆಟಗಾರರಿಗೆ ಸೆಪ್ಟೆಂಬರ್ 13ರಿಂದ 14 ದಿನಗಳ ಗಡುವು ನೀಡಲಾಗಿದೆ. ಈ ಹಂತದಲ್ಲಿ ಈ ಆರೋಪಗಳಿಗೆ ಐಸಿಸಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಹೇಳಿಕೆ ಬಿಡುಗಡೆ ಮಾಡಿದೆ.
ಅಮೀರ್ ಮತ್ತು ಅಶ್ಫಾಕ್ ವಿರುದ್ಧ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯ ಆರ್ಟಿಕಲ್ 2.1.3 ಮತ್ತು 2.4.2 ರಿಂದ 2.4.5 ರವರೆಗೆ 4 ಆರೋಪಗಳನ್ನು ಹೊರಿಸಲಾಗಿದೆ.