ಲಂಡನ್(ಯುಕೆ): ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಮತ್ತೆ ಇಂಗ್ಲೆಂಡ್ ನಂಬರ್ ಒನ್ ಪಟ್ಟಕ್ಕೆ ಜಿಗಿದಿದೆ. 123 ಪಾಯಿಂಟ್ಗಳಿಂದ ಅಗ್ರಸ್ಥಾನ ಅಲಂಕರಿಸಿದೆ.
ಐಸಿಸಿ ವಿಶ್ವಕಪ್ 2019ರ ಇಂಗ್ಲೆಂಡ್ ಮತ್ತು ಭಾರತ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ್ದ ಆಂಗ್ಲರ ಪಡೆ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿದೆ. ಇನ್ನು, ಈ ಪಂದ್ಯದಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ 122 ಪಾಯಿಂಟ್ಗಳಿಂದ ನಂಬರ್ ಒನ್ ಪಟ್ಟದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
-
ICYMI: India go into today's clash against Bangladesh as the No.2 side in the @MRFWorldwide ODI Men's Team Rankings following defeat to England on Sunday.#CWC19 pic.twitter.com/5NFxXPgGrD
— ICC (@ICC) July 2, 2019 " class="align-text-top noRightClick twitterSection" data="
">ICYMI: India go into today's clash against Bangladesh as the No.2 side in the @MRFWorldwide ODI Men's Team Rankings following defeat to England on Sunday.#CWC19 pic.twitter.com/5NFxXPgGrD
— ICC (@ICC) July 2, 2019ICYMI: India go into today's clash against Bangladesh as the No.2 side in the @MRFWorldwide ODI Men's Team Rankings following defeat to England on Sunday.#CWC19 pic.twitter.com/5NFxXPgGrD
— ICC (@ICC) July 2, 2019
ಇನ್ನುಳಿದಂತೆ ನ್ಯೂಜಿಲ್ಯಾಂಡ್ 3 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 4 ಮತ್ತು 5ನೇ ಸ್ಥಾನವನ್ನು ಅಲಂಕರಿಸಿವೆ. ಇಂದು ಬಾಂಗ್ಲಾ ವಿರುದ್ಧ ಕೊಹ್ಲಿ ಪಡೆ ಸೆಣಸಾಟ ನಡೆಸಲಿದ್ದು, ಇಂದಿನ ಪಂದ್ಯದಲ್ಲಿ ಏನಾದರೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದರೆ ಮತ್ತೆ ನಂಬರ್ ಒನ್ ಪಟ್ಟಕ್ಕೇರುವ ಸಾಧ್ಯತೆಯಿದೆ.