ETV Bharat / sports

ವಿಶ್ವಕಪ್ ವಿಡಿಯೋಗಳು ವೀಕ್ಷಣೆಯಾಗಿ​ದ್ದು ಎಷ್ಟು ಕೋಟಿ ಗೊತ್ತಾ?

2019 ರ ವಿಶ್ವಕಪ್​ ಟೂರ್ನಿಯ ವಿಡಿಯೋ ತುಣಕುಗಳು 460 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಎಂದು ಐಸಿಸಿ ತಿಳಿಸಿದೆ.

Cricket World Cup
author img

By

Published : Aug 7, 2019, 9:19 PM IST

ಲಂಡನ್​: 2019 ರ ವಿಶ್ವಕಪ್​ ಟೂರ್ನಿಯ ವೀಕ್ಷಣೆ ವಿವರವನ್ನು ಐಸಿಸಿ ಬಹಿರಂಗಗೊಳಿಸಿದ್ದು, ಈ ಬಾರಿ ದಾಖಲೆಯ ವೀಕ್ಷಣೆಯಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್​ ಟೂರ್ನಿಯಲ್ಲಿ ವಿಡಿಯೋ ತುಣಕುಗಳನ್ನು ವಿಶ್ವಾದ್ಯಂತ 460 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಗಾಗಿದೆ. ಇನ್ನು ಫೇಸ್​ಬುಕ್​ ಹಾಗೂ ಯೂಟ್ಯೂಬ್​ಗಳಲ್ಲಿ 350 ಕೋಟಿ ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.

ಇನ್ನು ಇಡೀ ಟೂರ್ನಿಯಲ್ಲಿ 3.1 ಕೋಟಿ ಟ್ವೀಟ್​ಗಳು ಐಸಿಸಿ ವಿಶ್ವಕಪ್​ ಕುರಿತು ಬಂದಿದೆ. ಐಸಿಸಿ ಇನ್ಸ್​ಸ್ಟಾಗ್ರಾಂ​ ಹಾಗೂ ಟ್ವಿಟರ್​ನಲ್ಲಿ ಶೇರ್​ ಆದ​ ವಿಡಿಯೋ ತುಣಕುಗಳು 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿವೆ. ಐಸಿಸಿ ಯೂಟ್ಯೂಬ್‌ ಚಾನೆಲ್‌ನಲ್ಲಿ 230(2.3 ಬಿಲಿಯನ್​) ಕೋಟಿಗೂ ಹೆಚ್ಚಿನ ನಿಮಿಷಗಳು, ಫೇಸ್‌ಬುಕ್‌ನಲ್ಲಿ 120 ಕೋಟಿಗಿಂತ ಹೆಚ್ಚು ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ. 1000 ಕೋಟಿಗೂ ಹೆಚ್ಚು ಇಂಪ್ರೆಸನ್ಸ್​ ಹಾಗೂ 6.8 ಕೋಟಿ ಎಂಗೇಜ್​ಮೆಂಟ್​ ಪಡೆದುಕೊಂಡಿದೆ.

ಈ ಕುರಿತು ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ' 2019 ವಿಶ್ವಕಪ್​ ಟೂರ್ನಿಯನ್ನು ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಮಾಡಲಾಗಿದೆ. ಕ್ರಿಕೆಟ್​ಗೆ ವಿಶ್ವವನ್ನೇ ಒಗ್ಗೂಡಿಸುವ ಶಕ್ತಿ ಇದೆ ಎಂಬುದು ಇದರಿಂದ ಸಾಬೀತಾಗಿದೆ. ಈ ಬಾರಿ ಬಹಳಷ್ಟು ಹೊಸ ಅಭಿಮಾನಿಗಳು ಹೆಚ್ಚು ಪಂದ್ಯಗಳ ವೀಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.

ಟ್ವಿಟರ್​ನಲ್ಲಿ ಕೊಹ್ಲಿ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ರನ್ನು ಗೌರವಿಸುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡಿರುವ ವಿಡಿಯೋ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.