ದುಬೈ: ಆಗಸ್ಟ್ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಹಾಲ್ ಆಫ್ ಫೇಮ್ ಪಟ್ಟಿಗೆ ಮೂವರು ಮಾಜಿ ಆಟಗಾರರು ಸೇರ್ಪಡೆಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಐಸಿಸಿಯ ಸಾಮಾಜಿಕ ಜಾಲಾತಾಣದಲ್ಲಿ ನೇರ ಪ್ರಸಾರವಾಗಲಿದೆ.
ಅಲನ್ ವಿಲ್ಕಿನ್ಸ್ ನಡೆಸಿಕೊಡುವ 60 ನಿಮಿಷಗಳ ಕಾರ್ಯಕ್ರಮದಲ್ಲಿ ಹಾಲ್ ಆಫ್ ಫೇಮ್ ಗೌರವಕ್ಕೆ ಸೇರ್ಪಡೆಗೊಳ್ಳುವ ಮೂವರು ಕ್ರಿಕೆಟಿಗರ ಹೆಸರು ಬಹಿರಂಗಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಲೆಜೆಂಡರಿ ಕ್ರಿಕೆಟಿಗರಾದ ಭಾರತದ ಸುನಿಲ್ ಗವಾಸ್ಕರ್, ದಕ್ಷಿಣಾ ಆಫ್ರಿಕಾದ ಶಾನ್ ಪೊಲಕ್ ಹಾಗೂ ಆಸ್ಟ್ರೇಲಿಯಾದ ಮೆಲೆನಿ ಜೋನ್ಸ್ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಆಲ್ ಆಫ್ ಫೇಮ್ಗೆ ಸೇರ್ಪಡೆಗೊಳ್ಳುವ ಮೂವರು ಕ್ರಿಕೆಟಿಗರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಕಳೆದ ವರ್ಷ ಭಾರತದ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ಆಲನ್ ಡೊನಾಲ್ಡ್ ಹಾಗೂ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಈ ಗೌರವಕ್ಕೆ ಪಾತ್ರರಾಗಿದ್ದರು. ಈ ಕಾರ್ಯಕ್ರಮ ಐಸಿಸಿಯ ಅಧಿಕೃತ ಯೂಟ್ಯೂಬ್, ಫೇಸ್ಬುಕ್ನಲ್ಲಿ ಪ್ರದರ್ಶನವಾಗಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿ 5 ವರ್ಷಗಳ ಬಳಿಕ ಅವರ ಕ್ರಿಕೆಟ್ ಕ್ಷೇತ್ರಕ್ಕೆ ನೀಡಿರುವ ಗಣನೀಯ ಸೇವೆಯನ್ನು ಗಮನಿಸಿ ಐಸಿಸಿ ಹಾಲ್ ಆಫ್ ಫೇಮ್ ಗೌರವವನ್ನು ನೀಡಲಿದೆ.