ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಪುರುಷರ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರೆ, ಮಿಥಾಲಿ ರಾಜ್ ಕಳೆದ 10 ವರ್ಷಗಳಲ್ಲಿ ತಮ್ಮ ಸಾಧನೆಗಾಗಿ ದಶಕದ ಮಹಿಳಾ ಆಟಗಾರ್ತಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಭಾರತೀಯ ಜೋಡಿಯಲ್ಲದೇ, ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಮತ್ತು ಕುಮಾರ್ ಸಂಗಕ್ಕಾರ (ಶ್ರೀಲಂಕಾ) ಈ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ಇತರ ಸ್ಪರ್ಧಿಗಳು.
ಮಹಿಳಾ ವಿಭಾಗದಲ್ಲಿ ಮಿಥಾಲಿ ರಾಜ್, ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಸುಜೈ ಬೇಟ್ಸ್ (ನ್ಯೂಜಿಲ್ಯಾಂಡ್), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್) ಮತ್ತು ಸಾರಾ ಟೇಲರ್ (ಇಂಗ್ಲೆಂಡ್) ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಪುರುಷರ ಏಕದಿನ ಆಟಗಾರ ಆಟಗಾರ ವಿಭಾಗದಲ್ಲಿ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಡಿವಿಲಿಯರ್ಸ್ ಮತ್ತು ಸಂಗಕ್ಕಾರ ಕೂಡ ನಾಮ ನಿರ್ದೇಶನಗೊಂಡಿದ್ದಾರೆ.
ಪುರುಷರ ಟಿ-20 ಪ್ಲೇಯರ್ ಆಫ್ ದಿ ಡಿಕೇಡ್ ವಿಭಾಗದಲ್ಲಿ ಕೊಹ್ಲಿ ಮತ್ತು ರೋಹಿತ್ ಕೂಡ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ರಶೀದ್ ಖಾನ್ (ಅಫ್ಘಾನಿಸ್ತಾನ), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಆ್ಯರೋನ್ ಫಿಂಚ್ (ಆಸ್ಟ್ರೇಲಿಯಾ), ಮಾಲಿಂಗ ಮತ್ತು ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಸೇರಿದ್ದಾರೆ.
ಓದಿ ಭಾರತ - ಆಸೀಸ್ ಅಹರ್ನಿಶಿ ಟೆಸ್ಟ್: ದಿನದಾಂತ್ಯಕ್ಕೆ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ
ಪುರುಷರ ಟೆಸ್ಟ್ ಪ್ಲೇಯರ್ ಆಫ್ ದಿ ಡಿಕೇಡ್ ಮತ್ತು ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗಳಲ್ಲಿ ಕೊಹ್ಲಿ ನಾಮನಿರ್ದೇಶನಗೊಂಡಿದ್ದಾರೆ.
ಮಹಿಳಾ ಏಕದಿನ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿಗೆ ಹಿರಿಯ ಭಾರತೀಯ ತಾರೆಗಳಾದ ಜುಲಾನ್ ಗೋಸ್ವಾಮಿ ಮತ್ತು ಮಿಥಾಲಿ ರಾಜ್ ಆಯ್ಕೆಯಾಗಿದ್ದಾರೆ. ಅಂತಿಮವಾಗಿ ವಿಜೇತರನ್ನು ಮತಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ:
ದಶಕದ ಆಟಗಾರ: ವಿರಾಟ್ ಕೊಹ್ಲಿ (ಭಾರತ) ರವಿಚಂದ್ರನ್ ಅಶ್ವಿನ್ (ಭಾರತ), ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಮತ್ತು ಕುಮಾರ್ ಸಂಗಕ್ಕಾರ (ಶ್ರೀಲಂಕಾ).
ದಶಕದ ಮಹಿಳಾ ಏಕದಿನ ಆಟಗಾರ್ತಿ: ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮಿಥಾಲಿ ರಾಜ್ (ಭಾರತ), ಸುಜೈ ಬೇಟ್ಸ್ (ನ್ಯೂಜಿಲೆಂಡ್), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್) ಮತ್ತು ಜುಲಾನ್ ಗೋಸ್ವಾಮಿ (ಭಾರತ).
ದಶಕದ ಮಹಿಳಾ ಆಟಗಾರ್ತಿ: ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ),ಸುಜೈ ಬೇಟ್ಸ್ (ನ್ಯೂಜಿಲ್ಯಾಂಡ್), ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್), ಮಿಥಾಲಿ ರಾಜ್ (ಭಾರತ), ಸಾರಾ ಟೇಲರ್ (ಇಂಗ್ಲೆಂಡ್).
ದಶಕದ ಏಕದಿನ ಆಟಗಾರ ಪುರುಷರ ವಿಭಾಗ: ವಿರಾಟ್ ಕೊಹ್ಲಿ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ (ಭಾರತ), ಎಂಎಸ್ ಧೋನಿ (ಭಾರತ), ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ).
ದಶಕದ ಟೆಸ್ಟ್ ಆಟಗಾರ ಪುರುಷರ ವಿಭಾಗ: ವಿರಾಟ್ ಕೊಹ್ಲಿ (ಭಾರತ), ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್), ಸ್ಮಿತ್, ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್), ರಂಗನಾ ಹೆರಾತ್ (ಶ್ರೀಲಂಕಾ), ಮತ್ತು ಯಾಸಿರ್ ಷಾ (ಪಾಕಿಸ್ತಾನ).
ದಶಕದ ಟಿ-20 ಆಟಗಾರ ಪುರುಷರ ವಿಭಾಗ: ರಶೀದ್ ಖಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಆ್ಯರೋನ್ ಫಿಂಚ್ (ಆಸ್ಟ್ರೇಲಿಯಾ), ಲಸಿತ್ ಮಾಲಿಂಗ (ಶ್ರೀಲಂಕಾ), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ಮತ್ತು ರೋಹಿತ್ ಶರ್ಮಾ (ಭಾರತ).
ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ವಿರಾಟ್ ಕೊಹ್ಲಿ (ಭಾರತ), ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್), ಬ್ರೆಂಡನ್ ಮೆಕಲಮ್ (ನ್ಯೂಜಿಲ್ಯಾಂಡ್), ಮಿಸ್ಬಾ-ಉಲ್-ಹಕ್ (ಪಾಕಿಸ್ತಾನ), ಎಂ.ಎಸ್. ಧೋನಿ (ಭಾರತ), ಅನ್ಯಾ ಶ್ರಬ್ಸೋಲ್ (ಇಂಗ್ಲೆಂಡ್), ಕ್ಯಾಥರೀನ್ ಬ್ರಂಟ್ (ಇಂಗ್ಲೆಂಡ್), ಮಹೇಲಾ ಜಯವರ್ಧನೆ (ಶ್ರೀಲಂಕಾ), ಮತ್ತು ಡೇನಿಯಲ್ ವೆಟ್ಟೋರಿ (ನ್ಯೂಜಿಲ್ಯಾಂಡ್ ).
ದಶಕ ಐಸಿಸಿ ಮಹಿಳಾ ಏಕದಿನ ತಂಡ
ಸುಜೈ ಬೇಟ್ಸ್ (ನ್ಯೂಜಿಲ್ಯಾಂಡ್), ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್), ಚಮರಿ ಅಟಪಟ್ಟು (ಶ್ರೀಲಂಕಾ), ಏಕ್ತಾ ಬಿಶ್ತ್ (ಭಾರತ), ಕ್ಯಾಥರೀನ್ ಬ್ರಂಟ್ (ಇಂಗ್ಲೆಂಡ್), ತ್ರಿಶಾ ಚೆಟ್ಟಿ (ದಕ್ಷಿಣ ಆಫ್ರಿಕಾ), ದಿಯಾಂಡ್ರಾ ಡೊಟಿನ್ (ವೆಸ್ಟ್ ಇಂಡೀಸ್), ಕಿಮ್ ಗಾರ್ತ್ (ಐರ್ಲೆಂಡ್ ), ಜುಲಾನ್ ಗೋಸ್ವಾಮಿ (ಭಾರತ), ಅಲಿಸಾ ಹೀಲಿ (ಆಸ್ಟ್ರೇಲಿಯಾ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ), ಜೆಸ್ ಜೊನಾಸ್ಸೆನ್ (ಆಸ್ಟ್ರೇಲಿಯಾ), ಮಾರಿಜನ್ನೆ ಕಾಪ್ (ದಕ್ಷಿಣ ಆಫ್ರಿಕಾ), ಹರ್ಮನ್‌ಪ್ರೀತ್ ಕೌರ್ (ಭಾರತ), ಜವೇರಿಯಾ ಖಾನ್ (ಪಾಕಿಸ್ತಾನ), ಹೀದರ್ ನೈಟ್ (ಇಂಗ್ಲೆಂಡ್), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಸುನೆ ಲೂಸ್ (ದಕ್ಷಿಣ ಆಫ್ರಿಕಾ), ಸ್ಮೃತಿ ಮಂಧಾನ (ಭಾರತ), ಸನಾ ಮಿರ್ (ಪಾಕಿಸ್ತಾನ), ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್), ಶಿಖಾ ಪಾಂಡೆ (ಭಾರತ), ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಮಿಥಾಲಿ ರಾಜ್ (ಭಾರತ), ಆ್ಯಮಿ ಸ್ಯಾಟರ್ತ್‌ವೈಟ್ (ನ್ಯೂಜಿಲ್ಯಾಂಡ್), ಮೆಗಾನ್ ಶ್ಚುಟ್ (ಆಸ್ಟ್ರೇಲಿಯಾ), ಅನ್ಯಾ ಶ್ರಬ್ಸೋಲ್ (ಇಂಗ್ಲೆಂಡ್), ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), ಸಾರಾ ಟೇಲರ್ (ಇಂಗ್ಲೆಂಡ್), ಡೇನ್ ವ್ಯಾನ್ ನೀಕೆರ್ಕ್ (ದಕ್ಷಿಣ ಆಫ್ರಿಕಾ)
ದಶಕದ ನಾಮನಿರ್ದೇಶಿತ ಐಸಿಸಿ ಪುರುಷರ ಏಕದಿನ ತಂಡ
ಸಯೀದ್ ಅಜ್ಮಲ್ (ಪಾಕಿಸ್ತಾನ), ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ), ಆರ್ ಅಶ್ವಿನ್ (ಭಾರತ), ಟ್ರೆಂಟ್ ಬೌಲ್ಟ್ (ನ್ಯೂಜಿಲ್ಯಾಂಡ್), ಜಸ್ಪ್ರಿತ್ ಬುಮ್ರಾ (ಭಾರತ), ಜೋಸ್ ಬಟ್ಲರ್ (ಇಂಗ್ಲೆಂಡ್), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ಎಬಿ ಡಿ ವಿಲಿಯರ್ಸ್ ( ದಕ್ಷಿಣ ಆಫ್ರಿಕಾ) ಶಿಖರ್ ಧವನ್ (ಭಾರತ), ಎಂ.ಎಸ್.ಧೋನಿ (ಭಾರತ), ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), ಟಿ ದಿಲ್ಶಾನ್ (ಶ್ರೀಲಂಕಾ), ಆ್ಯರೋನ್ ಫಿಂಚ್ (ಆಸ್ಟ್ರೇಲಿಯಾ), ಮಾರ್ಟಿನ್ ಗಪ್ಟಿಲ್ (ನ್ಯೂಜಿಲ್ಯಾಂಡ್), ಮೊಹಮ್ಮದ್ ಹಫೀಜ್ (ಪಾಕಿಸ್ತಾನ), ಶೈ ಹೋಪ್ (ವೆಸ್ಟ್ ಇಂಡೀಸ್), ತಮೀಮ್ ಇಕ್ಬಾಲ್ (ಬಾಂಗ್ಲಾದೇಶ), ರವೀಂದ್ರ ಜಡೇಜಾ (ಭಾರತ), ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ), ರಶೀದ್ ಖಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ), ಬ್ರೆಂಡನ್ ಮೆಕಲಮ್ (ನ್ಯೂಜಿಲ್ಯಾಂಡ್), ಮಿಸ್ಬಾ ಉಲ್-ಹಕ್ (ಪಾಕಿಸ್ತಾನ), ಇಯಾನ್ ಮಾರ್ಗನ್ (ಇಂಗ್ಲೆಂಡ್), ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ), ಮಶ್ರಫ್ ಮೊರ್ಟಾಜಾ (ಬಾಂಗ್ಲಾದೇಶ), ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), ತಿಸರಾ ಪೆರೆರಾ (ಶ್ರೀಲಂಕಾ), ಕಗಿಸೊ ರಬಾಡಾ ( ದಕ್ಷಿಣ ಆಫ್ರಿಕಾ) ಮುಶ್ಫಿಕುರ್ ರಹೀಮ್ (ಬಾಂಗ್ಲಾದೇಶ) ಮುಸ್ತಫಿಜುರ್ ರಹಮಾನ್ (ಬಾಂಗ್ಲಾದೇಶ), ಆದಿಲ್ ರಶೀದ್ (ಇಂಗ್ಲೆಂಡ್), ಜೋ ರೂಟ್ (ಇಂಗ್ಲೆಂಡ್), ಕುಮಾರ್ ಸಂಗಕ್ಕಾರ (ಶ್ರೀಲಂಕಾ), ಮೊಹಮ್ಮದ್ ಶಮಿ (ಭಾರತ), ರೋಹಿತ್ ಶರ್ಮಾ (ಭಾರತ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ), ಪಾಲ್ ಸ್ಟರ್ಲಿಂಗ್ (ಐರ್ಲೆಂಡ್), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ರಾಸ್ ಟೇಲರ್ (ನ್ಯೂಜಿಲ್ಯಾಂಡ್), ಬ್ರೆಂಡನ್ ಟೇಲರ್ (ಜಿಂಬಾಬ್ವೆ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್), ಕ್ರಿಸ್ ವೋಕ್ಸ್ (ಇಂಗ್ಲೆಂಡ್), ದಾವ್ಲತ್ ಜದ್ರನ್ (ಅಫ್ಘಾನಿಸ್ತಾನ)