ETV Bharat / sports

ಐಸಿಸಿ ಪ್ರಕಟಿಸಿರುವುದು ದಶಕದ ಟಿ20 ತಂಡವಲ್ಲ, ಐಪಿಎಲ್​ ತಂಡ: ಅಖ್ತರ್ - ರಶೀದ್​ ಲತೀಫ್

ಐಸಿಸಿ ಪ್ರಕಟಿಸಿದ ಮೂರು ಮಾದರಿಯ ಮಹಿಳಾ ಮತ್ತು ಪುರುಷರ ದಶಕದ ತಂಡಗಳಲ್ಲಿ ಪಾಕಿಸ್ತಾನದ ಯಾವುದೇ ಆಟಗಾರ ಅಥವಾ ಆಟಗಾರ್ತಿಯನ್ನು ಹೆಸರಿಸಿಲ್ಲ. ಈ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೋಯಬ್ ಅಖ್ತರ್​
ಶೋಯಬ್ ಅಖ್ತರ್​
author img

By

Published : Dec 27, 2020, 10:44 PM IST

ಹೈದರಾಬಾದ್​: ಐಸಿಸಿ ಪ್ರಕಟಿಸಿದ ದಶಕದ ಟಿ20 ತಂಡದಲ್ಲಿ ಬಾಬರ್​ ಅಜಮ್​ರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಪಾಕಿಸ್ತಾನದ‌ ಮಾಜಿ ವೇಗದ ಬೌಲರ್​ ಶೋಯಬ್ ಅಖ್ತರ್​ ಕಿಡಿ ಕಾರಿದ್ದಾರೆ.

ಐಸಿಸಿ ಪ್ರಕಟಿಸಿದ ಮೂರು ಮಾದರಿಯ ಮಹಿಳಾ ಮತ್ತು ಪುರುಷರ ದಶಕದ ತಂಡಗಳಲ್ಲಿ ಪಾಕಿಸ್ತಾನದ ಯಾವುದೇ ಆಟಗಾರ ಅಥವಾ ಆಟಗಾರ್ತಿಯನ್ನು ಹೆಸರಿಸಿಲ್ಲ. ಇದೇ ಕಾರಣಕ್ಕೆ ಮಾಜಿ ಆಟಗಾರ ರಶೀದ್ ಲತೀಫ್​ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಐಸಿಸಿ ಟೈಪಿಂಗ್​ ತಪ್ಪಿನಿಂದಾದ ದಶಕದ ಐಪಿಎಲ್​ ತಂಡ ಎಂದಿದ್ದಾರೆ.

"ನನ್ನ ಆಲೋಚನೆ ಪ್ರಕಾರ, ಪಾಕಿಸ್ತಾನ ಐಸಿಸಿ ಸದಸ್ಯ ರಾಷ್ಟ್ರ ಮತ್ತು ಅದು ಟಿ20 ಕ್ರಿಕೆಟ್ ಆಡುತ್ತಿದೆ ಎಂಬುದನ್ನು ಐಸಿಸಿ ಮರೆತಿದೆ. ಅವರು ಪ್ರಸ್ತುತ ನಂಬರ್​ ಒನ್​ ಶ್ರೇಯಾಂಕದಲ್ಲಿರುವ ಬಾಬರ್​ ಅಜಮ್​ರನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಅವರು ಪಾಕಿಸ್ತಾನದ ಒಬ್ಬನೇ ಒಬ್ಬ ಆಟಗಾರರನ್ನು ಆಯ್ಕೆ ಮಾಡಿಲ್ಲ. ನಮಗೆ ನಿಮ್ಮ ದಶಕದ ಟಿ20 ತಂಡದ ಅಗತ್ಯವಿಲ್ಲ. ಏಕೆಂದರೆ, ನೀವು ಘೋಷಿಸಿರುವುದು ಐಪಿಎಲ್​ ತಂಡ, ವಿಶ್ವ ಕ್ರಿಕೆಟ್​ ತಂಡವಲ್ಲ" ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಖ್ತರ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.