ETV Bharat / sports

ಸುಳ್ಳು ಭರವಸೆ ನೀಡಲ್ಲ... ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಕುರಿತು ಎಬಿಡಿ ಮನದಾಳದ ಮಾತು - ಟಿ-20 ವಿಶ್ವಕಪ್​

ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್​ಬ್ಯಾಕ್​​ ಮಾಡುವುದರ ಬಗ್ಗೆ ಇದೇ ಮೊದಲ ಸಲ ಎಬಿ ಡಿವಿಲಿಯರ್ಸ್​ ಖುದ್ದಾಗಿ ಮಾತನಾಡಿದ್ದು, ಯಾವುದೇ ಸುಳ್ಳು ಭರವಸೆ ನೀಡಲು ಇಷ್ಟಪಡಲ್ಲ ಎಂದಿದ್ದಾರೆ.

AB de Villiers
AB de Villiers
author img

By

Published : Apr 13, 2020, 1:34 PM IST

ಕೇಪ್​ಟೌನ್​: ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್​ ಎಬಿ ಡಿವಿಲಿಯರ್ಸ್​ ತಂಡಕ್ಕೆ ಮತ್ತೊಮ್ಮೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇಲ್ಲಿಯವರೆಗೆ ಮಿ.360 ಖ್ಯಾತಿಯ ಎಬಿಡಿ ಅದರ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮೌನ ಮುರಿದು ಮಾಹಿತಿ ಹೊರಹಾಕಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಎಬಿಡಿ ನಾನು ಯಾವುದೇ ಸುಳ್ಳು ಭರವಸೆ ನೀಡಲ್ಲ. ವಿಶ್ವದಲ್ಲಿ ಕೋವಿಡ್​ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಆಯೋಜನೆಗೊಂಡಿರುವ ವಿಶ್ವಕಪ್​​ ಮುಂದೂಡಿಕೆಯಾಗುವ ಸಾಧ್ಯತೆ ಇರುತ್ತದೆ. ಆ ವೇಳೆಗೆ ನನ್ನ ಲಭ್ಯತೆ ಇರಬಹುದು. ಆದರೆ ನನ್ನ ದೇಹ ಯಾವ ರೀತಿಯಾಗಿ ಸ್ಪಂದಿಸಲಿದೆ ಎಂಬುದು ಮಹತ್ವದಾಗಿರುತ್ತದೆ.

ನನಗೂ ಕ್ರಿಕೆಟ್​ ಆಡಲು ಇಷ್ಟವಿದೆ. ಆದರೆ ಮುಂಚಿತವಾಗಿ ಇಂತಹ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಆ ವೇಳೆಗೆ ತುಂಬಾ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ದಕ್ಷಿಣ ಆಫ್ರಿಕಾ ಕೋಚ್​​ ಮಾರ್ಕ್​ ಬೌಚರ್​​ ಜೂನ್​ 1ರೊಳಗಾಗಿ ತಂಡಕ್ಕೆ ಲಭ್ಯರಾಗುವಂತೆ ಹೇಳಿದ್ದರು. ಆದರೆ ಕೋವಿಡ್​-19 ಅಬ್ಬರ ಜೋರಾಗಿರುವ ಕಾರಣ ಪಂದ್ಯಗಳು ರದ್ಧಾಗಿದ್ದು, ವಿಶ್ವಕಪ್​ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.