ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯಿಂದ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿರುವ ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡದಿರುವುದನ್ನು ಮಿಸ್ ಮಾಡಿಕೊಳ್ಳುವುದಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಆಗಿರುವ ರೋಡ್ಸ್ ಟ್ವಿಟರ್ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್ ಸಂವಾದದಲ್ಲಿ ರೈನಾರ ಅನುಪಸ್ಥಿತಿ ನನಗಷ್ಟೇ ಅಲ್ಲ ಐಪಿಎಲ್ಗೂ ಕಾಡುತ್ತಿದೆ ಎಂದಿದ್ದಾರೆ.
-
Of course I miss @ImRaina @ChennaiIPL and #IPL not the same without #MrIPL. Don’t get me wrong, no player is bigger than the game, and #IPL continues giving young Indian stars the opportunity to display their talents; but yes, I miss watching him play https://t.co/zd6xZGIDV9
— Jonty Rhodes (@JontyRhodes8) September 28, 2020 " class="align-text-top noRightClick twitterSection" data="
">Of course I miss @ImRaina @ChennaiIPL and #IPL not the same without #MrIPL. Don’t get me wrong, no player is bigger than the game, and #IPL continues giving young Indian stars the opportunity to display their talents; but yes, I miss watching him play https://t.co/zd6xZGIDV9
— Jonty Rhodes (@JontyRhodes8) September 28, 2020Of course I miss @ImRaina @ChennaiIPL and #IPL not the same without #MrIPL. Don’t get me wrong, no player is bigger than the game, and #IPL continues giving young Indian stars the opportunity to display their talents; but yes, I miss watching him play https://t.co/zd6xZGIDV9
— Jonty Rhodes (@JontyRhodes8) September 28, 2020
ಅಭಿಮಾನಿಯೊಬ್ಬ ನೀವು ಸುರೇಶ್ ರೈನಾರನ್ನು ಮಿಸ್ ಮಾಡಿಕೊಳ್ಳಲಿದ್ದೀರಾ? ಎಂದು ಕೇಳಿದ್ದಕ್ಕೆ ಉ್ತತರಿಸಿರುವ ರೋಡ್ಸ್, " ಖಂಡಿತವಾಗಿಯೂ ನಾನು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ರೈನಾ ಇಲ್ಲದಿರುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ. ಮಿಸ್ಟರ್ಐಪಿಎಲ್ ಇಲ್ಲದೆ ಲೀಗ್ ಹಿಂದಿನ ಆವೃತ್ತಿಗಳಂತಿರುವುದಿಲ್ಲ. ಆದರೆ, ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ, ಯಾವುದೇ ಆಟಗಾರ ಆಟಕ್ಕಿಂತ ದೊಡ್ಡವನಲ್ಲ ಮತ್ತು ಐಪಿಎಲ್ ಯುವ ಭಾರತೀಯ ತಾರೆಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶವನ್ನು ನೀಡುತ್ತಲೇ ಇದೆ. ಆದರೆ, ಖಂಡಿತ ರೈನಾರ ಆಟವನ್ನು ನಾನು ತಪ್ಪಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ಸಿಎಸ್ಕೆ ನಿಷೇಧಗೊಂಡಿದ್ದ 2 ವರ್ಷಗಳನ್ನು ಬಿಟ್ಟು ರೈನಾ ಸಿಎಸ್ಕೆ ತಂಡದ ಪ್ರಮುಖ ಭಾಗವಾಗಿದ್ದರು. ಅವರು ಸಿಎಸ್ಕೆ ಎಲ್ಲಾ 10 ಆವೃತ್ತಿಗಳಲ್ಲೂ ಯಶಸ್ವಿಯಾಗಿ ಪ್ಲೇಆಫ್ ತಲುಪಲು ನೆರವಾಗಿದ್ದರು. ಈಗಾಗಲೆ ಕಳೆದ ಎರಡು ಪಂದ್ಯಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯವನ್ನು ನೋಡಿದ ಅಭಿಮಾನಿಗಳು ಕೂಡ ರೈನಾರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.