ETV Bharat / sports

ಆಸೀಸ್​ ವಿರುದ್ಧದ ಬಾಕ್ಸಿಂಗ್​ ಡೇ ಟೆಸ್ಟ್​ಗೂ ಮುನ್ನ ಸಚಿನ್​ರ ಆ ಇನ್ನಿಂಗ್ಸ್​ 10 ಬಾರಿ ವೀಕ್ಷಿಸಿದ್ದೆ: ರಹಾನೆ - ಲಾರ್ಡ್ಸ್​ನಲ್ಲಿ ಶತಕ

ಕೇವಲ 36 ರನ್​ಗಳಿಗೆ ಆಲೌಟ್​ ಆದ ಕರಾಳ ನೆನಪನ್ನು ಬದಿಗೊತ್ತಿ ಹೊಸ ಹುರುಪಿನೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ತಿರುಗಿ ಬೀಳಲು ತಮಗೆ ಸಚಿನ್​ ನಾಯಕರಾಗಿದ್ದ ವೇಳೆ ಎಂಸಿಜಿಯಲ್ಲಿ ಸಿಡಿಸಿದ್ದ ಶತಕ ನೆರವಾಯಿತು. ಅವರ ಬ್ಯಾಟಿಂಗ್ ವಿಡಿಯೋ ವೀಕ್ಷಣೆ ಮಾಡಿದ್ದರಿಂದ ನನ್ನಲ್ಲಿ ಉತ್ಸಾಹ ಹೆಚ್ಚಾಯಿತು ಎಂದು ರಹಾನೆ ತಿಳಿಸಿದ್ದಾರೆ.

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ
author img

By

Published : Jan 25, 2021, 5:33 PM IST

Updated : Jan 25, 2021, 6:12 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೊದಲ ಟೆಸ್ಟ್​ನಲ್ಲಿ ಹೀನಾಯವಾಗಿ ಸೋತಿತ್ತು. ನಂತರ ತಿರುಗಿಬಿದ್ದು, 2-1ರಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ವಶಪಡಿಸಿಕೊಂಡಿತ್ತು. ಆಸೀಸ್​ ನೆಲದಲ್ಲಿ ನಾಯಕನಾದ ಮೊದಲ ಟೆಸ್ಟ್​ ಪಂದ್ಯದಲ್ಲೇ ರಹಾನೆ ಅದ್ಭುತ ಶತಕ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್​ ಗೆಲ್ಲಲು ನೆರವಾಗಿದ್ದರು.

ಕೇವಲ 36 ರನ್​ಗಳಿಗೆ ಆಲೌಟ್​ ಆದ ಕರಾಳ ನೆನಪನ್ನು ಬದಿಗೊತ್ತಿ ಹೊಸ ಹುರುಪಿನೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ತಿರುಗಿ ಬೀಳಲು ತಮಗೆ ಸಚಿನ್​ ನಾಯಕರಾಗಿದ್ದ ವೇಳೆ ಎಂಸಿಜಿಯಲ್ಲಿ ಸಿಡಿಸಿದ್ದ ಶತಕ ನೆರವಾಯಿತು. ಅವರ ಬ್ಯಾಟಿಂಗ್ ವಿಡಿಯೋ ವೀಕ್ಷಣೆ ಮಾಡಿದ್ದರಿಂದ ನನ್ನಲ್ಲಿ ಉತ್ಸಾಹ ಹೆಚ್ಚಾಯಿತು ಎಂದು ರಹಾನೆ ತಿಳಿಸಿದ್ದಾರೆ.

" ನಾನು ಸಚಿನ್‌ ತೆಂಡೂಲ್ಕರ್‌ ಅವರು ನಾಯಕನಾಗಿದ್ದ ವೇಳೆ ಎಂಸಿಜಿಯಲ್ಲಿ ಶತಕ ಸಿಡಿಸಿದ್ದ ವಿಡಿಯೋವನ್ನು ಪಂದ್ಯಕ್ಕೂ ಮುನ್ನ ವೀಕ್ಷಿಸಿದ್ದೆ. ಅವರ ಇನ್ನಿಂಗ್ಸ್​ ವೀಕ್ಷಿಸಿದ ನಂತರ ಬಾಕ್ಸಿಂಗ್‌ ಡೇ ಪಂದ್ಯದಲ್ಲಿ 116 ರನ್ ​ಗಳಿಸಿದೆ(ಅವರು ಸಿಡಿಸಿದ್ದು 112 ರನ್​). ನಾನು ಇನ್ನಿಂಗ್ಸ್​ ಆಡುವ ಹಿಂದಿನ ರಾತ್ರಿ ಸಚಿನ್‌ ಆಟವನ್ನು 10 ಬಾರಿ ವೀಕ್ಷಿಸಿದ್ದೆ. ಪಂದ್ಯದ ದಿನದ ಬೆಳಗ್ಗೆಯೂ 6 ರಿಂದ 7 ಬಾರಿ ವೀಕ್ಷಣೆ ಮಾಡಿದ್ದೆ. ಅವರು(ಸಚಿನ್) ಮತ್ತು ದ್ರಾವಿಡ್‌ ನನ್ನ ರೋಲ್ ಮಾಡೆಲ್​ಗಳು" ಎಂದು ಸ್ಪೋರ್ಟ್ಸ್‌ ಟುಡೇಗೆ ನೀಡಿದ ಸಂದರ್ಶನದಲ್ಲಿ ರಹಾನೆ ತಿಳಿಸಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಬಡ್ತಿ ಪಡಿದಿದ್ದ ರಹಾನೆ ಬಾಕ್ಸಿಂಗ್‌ ಡೇ ಟೆಸ್ಟ್​ನಲ್ಲಿ ತಂಡವನ್ನು ಮುಂದೆ ನಿಂತು ನಡೆಸಿದ್ದು, ಆಕರ್ಷಕ ಶತಕ( 112)ಸಿಡಿಸಿದ್ದರು. ಆದರೆ ಮುಂಬೈ ಆಟಗಾರನ ಪ್ರಕಾರ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್‌ನಲ್ಲಿ ಸಿಡಿಸಿದ್ದ ಶತಕ ಇಂದಿಗೂ ತಮ್ಮ ನೆಚ್ಚಿನ ಶತಕ ಎಂದು ತಿಳಿಸಿದ್ದಾರೆ.

ನಾನು ರನ್‌ ಗಳಿಸಿದಾಗ ಭಾರತ ತಂಡ ಗೆದ್ದರೆ ಅದು ತುಂಬಾ ವಿಶೇಷವಾದದ್ದಾಗಿರುತ್ತದೆ. ನನಗೆ ವೈಯಕ್ತಿಕ ದಾಖಲೆಗಳಿಗಿಂತ ತಂಡಕ್ಕಾಗಿ ಟೆಸ್ಟ್‌ ಪಂದ್ಯಗಳನ್ನು ಗೆಲ್ಲುವುದು ಮತ್ತು ಸರಣಿಗಳನ್ನು ಗೆಲ್ಲುವುದೇ ನನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ಆಟಗಾರರು ನಮ್ಮನ್ನು ಲಿಫ್ಟ್ ಒಳಕ್ಕೆ ಸೇರಿಸುತ್ತಿರಲಿಲ್ಲ: ಅಶ್ವಿನ್

Last Updated : Jan 25, 2021, 6:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.