ಚೆನ್ನೈ: ಭಾರತ ತಂಡ ಮಂಗಳವಾರ ಇಂಗ್ಲೆಂಡ್ ವಿರುದ್ಧ 227 ರನ್ಗಳಿಂದ ಸೋಲು ಕಂಡ ನಂತರ ವಿರಾಟ್ ಕೊಹ್ಲಿ ನಾಯಕತ್ವ ಮತ್ತೊಮ್ಮೆ ಪರಿಶೀಲನೆಗೆ ಒಳಪಟ್ಟಿದೆ.
ಮೊದಲ ಟೆಸ್ಟ್ನಲ್ಲಿ 420 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡ ಕೊನೆಯ ದಿನದ 2ನೇ ಸೆಷನ್ನಲ್ಲಿ 192 ರನ್ಗಳಿಗೆ ಆಲೌಟ್ ಆಗುವ ಮೂಲಕ 227 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಭಾರತದ ತವರಿನಲ್ಲಿನ ಸತತ 14 ಪಂದ್ಯಗಳ ಗೆಲುವಿನ ಓಟಕಕ್ಕೂ ತೆರಬಿದ್ದಿದೆ. ಅಲ್ಲದೇ 1999ರ ನಂತರ ಚೆನ್ನೈನಲ್ಲಿ ಮೊದಲ ಸೋಲು ಕೂಡ ಇದಾಗಿದೆ.
ಈ ಪಂದ್ಯ ಸೋಲುತ್ತಿದ್ದಂತೆ ಕೊಹ್ಲಿ ನಾಯಕತ್ವದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಮಾತನಾಡಿರುವ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಕೂಡ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಮತ್ತೊಂದು ಪಂದ್ಯ ಸೋತರೆ ಕೊಹ್ಲಿ ನಾಯಕತ್ವ ಕೊನೆಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ವರ್ಲ್ಡ್ ಒನ್ ನ್ಯೂಸ್ ವೆಬ್ಸೈಟ್ ಜೊತೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಬಬ್ಬ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್. ಆದರೆ, ಭಾರತ ತಂಡ ಅವರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅವರ ನಾಯಕತ್ವದಲ್ಲಿ ಆಡಿರುವ ಕಳೆದ 4 ಪಂದ್ಯಗಳಲ್ಲೂ ಭಾರತ ತಂಡ ಸೋತಿದೆ. ನನ್ನ ಪ್ರಕಾರ ಕೊಹ್ಲಿ ಈಗ ಒತ್ತಡದಲ್ಲಿದ್ದಾರೆ. ಏಕೆಂದರೆ ಅಜಿಂಕ್ಯ ರಹಾನೆ ನಾಯಕನಾಗಿ ಅತ್ಯುತ್ತಮ ನಿರ್ವಹಣೆ ತೋರುತ್ತಿದ್ದಾರೆ ಎಂದು ಮಾಂಟಿ ಪನೇಸರ್ ತಿಳಿಸಿದ್ದಾರೆ.
ಭಾರತ ತಂಡ ಈಗಾಗಲೇ ಕೊಹ್ಲಿ ನಾಯಕತ್ವದಲ್ಲಿ ಸತತ 4 ಪಂದ್ಯಗಳಲ್ಲಿ ಸೋತಿದೆ. ಐದನೇ ಪಂದ್ಯದಲ್ಲೇನದರೂ ಸೋತರೆ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಳಿಯಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಪನೇಸರ್ ಹೇಳಿದ್ದಾರೆ.
ಕಳೆದ ವರ್ಷ ನ್ಯೂಜಿಲ್ಯಾಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡದ 2-0ಯಲ್ಲಿ ಟೆಸ್ಟ್ ಸರಣಿ ಸೋಲು ಕಂಡಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ನಲ್ಲಿ ನಡೆದಿದ್ದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ 36ಕ್ಕೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ 227 ರನ್‌ಗಳ ಬೃಹತ್ ಸೋಲು ಕಂಡಿದ್ದು ಕೂಡ ಕೊಹ್ಲಿ ನಾತಕತ್ವವನ್ನು ತೂಗುಯ್ಯಾಲೆಯಲ್ಲಿರಿಸಲಿದೆ.
ಇದನ್ನು ಓದಿ:ಸೋಲಿಗೆ ನೆಪಗಳನ್ನ ಹುಡುಕದ ಕೊಹ್ಲಿ ನಾಯಕತ್ವವನ್ನ ಪ್ರೀತಿಸುತ್ತೇನೆ - ಯೋಹಾನ್ ಬ್ಲಾಕ್