ETV Bharat / sports

ಡೇಲ್​ ಸ್ಟೈನ್​ ಪ್ರಕಾರ ಈ ಇಬ್ಬರು ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡುವುದು ಕಷ್ಟಕರ - Dale Steyn latest updates

ಸ್ಟೈನ್​ ತಮ್ಮ ವೃತ್ತಿ ಜೀವನದಲ್ಲಿ ಸ್ಮಿತ್​ ಹಾಗೂ ವಿಂಡೀಸ್​ನ ಶಿವನರೈನ್​ ಚಂದ್ರಪಾಲ್​ಗೆ ಬೌಲಿಂಗ್​ ಮಾಡಬೇಕಾದರೆ ತುಂಬಾ ಕಷ್ಠ ಅನುಭವಿಸಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Dale Steyn
author img

By

Published : Oct 10, 2019, 11:04 PM IST

ಕೇಪ್​ಟೌನ್​: ವಿಶ್ವ ಕ್ರಿಕೆಟ್​ನ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಡೇಲ್​ ಸ್ಟೈನ್​ ತಮ್ಮ ವೃತ್ತಿ ಜೀವನದಲ್ಲಿ ಸ್ಟೀವ್​ ಸ್ಮಿತ್​ರಿಗೆ ಬೌಲಿಂಗ್​ ಮಾಡುವುದಿಲ್ಲ ಎಂಬುದೇ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.

ಒಂದು ವರ್ಷ ನಿಷೇಧದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ಸ್ಟೀವ್​ ಸ್ಮಿತ್​ ಕಳೆದ ತಿಂಗಳು ನಡೆದ ಮುಕ್ತಾಯವಾದ ಆ್ಯಶಸ್​ ಸರಣಿಯಲ್ಲಿ 774 ರನ್​ಗಳಿಸಿ ತಾವೊಬ್ಬ ಟೆಸ್ಟ್​ ಸ್ಪೆಷಲಿಸ್ಟ್​ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದರು.

ಇದೀಗ ಸ್ಮಿತ್​ ಕುರಿತು ಮಾತನಾಡಿರುವ ಸ್ಟೈನ್​, ತಾನೆಂದೂ ಸ್ಟಿವ್​ ಸ್ಮಿತ್​ಗೆ ಬೌಲಿಂಗ್​ ಮಾಡುವುದಿಲ್ಲ ಎಂಬುದೇ ಖುಷಿಯ ವಿಚಾರವಾಗಿದೆ.​ ಸ್ಮಿತ್​ ಬ್ಯಾಟಿಂಗ್​ ನಡೆಸುತ್ತಿದ್ದರೆ ಅವರಿಗೆ ಲೆಗ್​ಸೈಡ್​ ಅಥವಾ ಔಟ್​ಸೈಡ್​ಗೆ​ ಬೌಲಿಂಗ್​ ಮಾಡಬೇಕೆಂಬುದೇ ತಿಳಿಯುವುದಿಲ್ಲ. ಸ್ಮಿತ್​ ಅಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸುತ್ತಾರೆ. ಸ್ಮಿತ್​ಗೆ ಬೌಲಿಂಗ್ ಮಾಡುವುದು ಬೌಲರುಗಳಿಗೆ ಸವಾಲಿನ ಕೆಲಸ ಎಂದಿದ್ದಾರೆ.

Dale Steyn
ಚಂದ್ರಪಾಲ್​ ಮತ್ತು ಸ್ಟೀವ್​ ಸ್ಮಿತ್​

ಸ್ಟೈನ್​ ತಮ್ಮ ವೃತ್ತಿ ಜೀವನದಲ್ಲಿ ಸ್ಮಿತ್​ ಹಾಗೂ ವಿಂಡೀಸ್​ನ ಶಿವನರೈನ್​ ಚಂದ್ರಪಾಲ್​ಗೆ ಬೌಲಿಂಗ್​ ಮಾಡಬೇಕಾದರೆ ತುಂಬಾ ಕಷ್ಠ ಅನುಭವಿಸಿದ್ದರಂತೆ. ಇವರಿಬ್ಬರೂ ಟೆಸ್ಟ್​ ಕ್ರಿಕೆಟ್​ನ ಕ್ಲಾಸ್​ ಬ್ಯಾಟ್ಸ್​ಮನ್​ಗಳಾದ ಜಾಕ್​ ಕಾಲೀಸ್​, ಮೈಕಲ್​ ವಾನ್​ಗಿಂತಲೂ ಭಿನ್ನರಾಗಿದ್ದಾರೆ. ಕಾಲೀಸ್​, ವಾನ್​ ಅಂತಹವರಿಗೆ ಬೌಲಿಂಗ್​ ಮಾಡಬೇಕಾದರೆ ಅವರು ಅನುಸರಿಸುವ ಬ್ಯಾಟಿಂಗ್​ ತಂತ್ರಗಾರಿಕೆಯನ್ನು ಗುರುತಿಸಿ ಅದಕ್ಕೆ ತಕ್ಕನಾದ ಬೌಲಿಂಗ್​ ಮಾಡುವ ದಾರಿಯನ್ನು ಕಂಡುಕೊಂಡಿದ್ದೆ. ಆದರೆ ಸ್ಮಿತ್​-ಚಂದ್ರಪಾಲ್​ರನ್ನು ಔಟ್​ ಮಾಡುವುದು ಹೇಗೆ ಎಂಬ ಚಿಂತೆ ನನಗೆ ತುಂಬಾ ಕಾಡಿತ್ತು ಎಂದು ಸ್ಟೈನ್​ ತಿಳಿಸಿದ್ದಾರೆ.

ಈಗಾಗಲೆ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಡೇಲ್​ ಸ್ಟೈನ್​ ತಾವೂ ಸ್ಮಿತ್​ಗೆ ಬೌಲಿಂಗ್​ ಮಾಡಲು ಸಾಧ್ಯವಿಲ್ಲ ಎಂಬ ವಿಚಾರವೇ ನನಗೆ ಖುಷಿ ತಂದಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

ಮುಂದಿನ ಬಿಗ್​ಬ್ಯಾಶ್‌ ​ಟಿ20 ಲೀಗ್​ನಲ್ಲಿ ಮೆಲ್ಬೋರ್ನ್​ಸ್ಟಾರ್​ ತಂಡದ ಪರ ಡೇಲ್ ಸ್ಟೈನ್ ಡೆಬ್ಯೂ ಮಾಡಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.