ETV Bharat / sports

ಟೆಸ್ಟ್ ತಂಡಕ್ಕೆ ಕಂಬ್ಯಾಕ್​ ಮಾಡುವ ಭರವಸೆ ಕಳೆದುಕೊಂಡಿಲ್ಲ: ಶಿಖರ್ ಧವನ್

2018 ಟೀಂ ಇಂಡಿಯಾ ಪರ ಕಡೆಯ ಟೆಸ್ಟ್​ ಪಂದ್ಯ ಆಡಿರುವ ಆರಂಭಿಕ ಆಟಗಾರ ಶೀಖರ್ ಧವನ್,​ ಮತ್ತೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಭರವಸೆ ಹೊಂದಿದ್ದಾರೆ.

Shikhar Dhawan
ಶಿಖರ್ ಧವನ್
author img

By

Published : Sep 7, 2020, 12:27 PM IST

ದುಬೈ: ಭಾರತ ಟೆಸ್ಟ್​ ತಂಡಕ್ಕೆ ಕಂಬ್ಯಾಕ್​ ಮಾಡುವ ಭರವಸೆ ಬಿಟ್ಟುಕೊಟ್ಟಿಲ್ಲ. ಇದಕ್ಕಾಗಿ ಮುಂಬರುವ ಅವಕಾಶಗಳನ್ನು ನೋಡುತ್ತಿದ್ದೇನೆ ಎಂದು ಟೀಂ ಇಂಡಿಯಾ ಸೀಮಿತ ಓವರ್‌ಗಳ ಆರಂಭಿಕ ಆಟಗಾರ ಶಿಖರ್ ಧವನ್ ಹೆಳಿದ್ದಾರೆ.

34 ವರ್ಷದ ಧವನ್ ಕೊನೆಯದಾಗಿ ಸೆಪ್ಟೆಂಬರ್ 2018ರಲ್ಲಿ ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. 'ನಾನು ಟೆಸ್ಟ್ ತಂಡದ ಭಾಗವಾಗಿಲ್ಲ. ಆದರೆ ಕಂಬ್ಯಾಕ್​ ಮಾಡುವ ಎಲ್ಲಾ ಭರವಸೆಗಳನ್ನು ತ್ಯಜಿಸಿದ್ದೇನೆ ಎಂದರ್ಥವಲ್ಲ' ಎಂದು ಧವನ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Shikhar Dhawan
ಶಿಖರ್ ಧವನ್

'ನನಗೆ ಅವಕಾಶ ಸಿಕ್ಕಾಗಲೆಲ್ಲಾ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ನಾನು ಶತಕ ಬಾರಿಸಿದ್ದೆ. ನಂತರ ನಾನು ಏಕದಿನ ತಂಡಕ್ಕೆ ಪುನರಾಗಮನ ಮಾಡಿದ್ದೇನೆ. ನನಗೆ ಅವಕಾಶ ಸಿಕ್ಕರೆ ಏಕೆ ಬಿಟ್ಟುಕೊಡಲಿ' ಎಂದಿದ್ದಾರೆ.

2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಧವನ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು. ಆದರೆ ಐದು ದಿನಗಳ ಪಂದ್ಯದಲ್ಲಿ ಸ್ಥಿರತೆಗಾಗಿ ಆಗಾಗ್ಗೆ ಹೆಣಗಾಡಿದ್ದಾರೆ. ಟೆಸ್ಟ್​ ತಂಡದಲ್ಲಿ ಆರಂಭಿಕ ಆಟಗಾರರ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಮಾಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಅವರಂತಹ ಹಲವಾರು ಆಯ್ಕೆಗಳನ್ನು ಟೀಂ ಇಂಡಿಯಾ ಹೊಂದಿದ್ದು, ಧವನ್ ಅವರ ಆಯ್ಕೆಯನ್ನು ಇನ್ನಷ್ಟು ಕಷ್ಟಕರವಾಗಿಸಿದೆ.

Shikhar Dhawan
ಶಿಖರ್ ಧವನ್

ಆದರೂ ಶಿಖರ್ ಧವನ್ ಆಶಾವಾದಿಯಾಗಿಯೇ ಉಳಿದಿದ್ದಾರೆ. 'ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ. ಮುಂದಿನ ವರ್ಷ ಟಿ-20 ವಿಶ್ವಕಪ್ ಇದೆ. ಆದ್ದರಿಂದ ನಾನು ಪ್ರದರ್ಶನವನ್ನು ಮುಂದುವರಿಸಬೇಕು. ನನ್ನನ್ನು ಫಿಟ್​ ಆಗಿ ಇರಿಸಿಕೊಳ್ಳಬೇಕು. ಸತತವಾಗಿ ರನ್ ಗಳಿಸಬೇಕು' ಎಂದಿದ್ದಾರೆ.

ಧವನ್ ಇಲ್ಲಿಯವರೆಗೆ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಏಳು ಶತಕಗಳೊಂದಿಗೆ 2,315 ರನ್ ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.