ಚೆನ್ನೈ: ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ರನ್ಔಟ್ ವಿಚಾರದಲ್ಲಿ ಅಂಪೈರ್ ತಗೆದುಕೊಂಡ ನಿರ್ಧಾರ ಭಾರತ ತಂಡದ ನಾಯಕ ಕೊಹ್ಲಿಯನ್ನು ಕೆರಳಿಸಿದೆ.
ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ರನ್ಗಾಗಿ ಓಡುವಾಗ ವೆಸ್ಟ್ ಇಂಡೀಸ್‌ನ ಫೀಲ್ಡರ್ ರಾಸ್ಟನ್ ಚೇಸ್ ಡೈರೆಕ್ಟ್ ಹಿಟ್ ಮಾಡಿದ್ದರು. ಈ ವೇಳೆ ಅಂಪೈರ್ ಬಳಿ ರನ್ಔಟ್ಗೆ ವಿಂಡೀಸ್ ಆಟಗಾರರು ಮನವಿ ಮಾಡಿದರು. ಆದರೆ ಅಂಪೈರ್ ಶಾನ್ ಜಾರ್ಜ್ ನಾಟೌಟ್ ಎಂದು ತೀರ್ಪು ನೀಡಿದರು.
ಆದರೆ ಅಂಪೈರ್ ಮೂರನೇ ಅಂಪೈರ್ಗೆ ನೀಡದೇ ನೇರವಾಗಿ ನಾಟೌಟ್ ಎಂದು ತೀರ್ಪು ನೀಡಿದ್ದಕ್ಕೆ ವಿಂಡೀಸ್ ಆಟಗಾರರ ಅಸಮಧಾನ ವ್ಯಕ್ತಪಡಿಸಿದರು. ನಂತರ ಟಿವಿ ರಿಪ್ಲೇ ನೋಡಿದ ಜಾರ್ಜ್ ತೀರ್ಪಿಗಾಗಿ ಕೊನೆಗೂ ಮೂರನೇ ಅಂಪೈರ್ ಮೊರೆ ಹೋದರು. ಮೊದಲು ನಾಟೌಟ್ ನೀಡಿ ಮತ್ತೆ ಮೂರನೇ ಅಂಪೈರ್ಗೆ ಮನವಿ ಮಾಡಿದ್ದರಿಂದ ಮೈದಾನದ ಅಂಪೈರ್ ಶಾನ್ ಜಾರ್ಜ್ ವಿರುದ್ಧ ವಿರಾಟ್ ಕೊಹ್ಲಿ ಅಸಮಧಾನ ವ್ಯಕ್ತಪಡಿಸಿ ಕೋಪದಿಂದ ಡ್ರೆಸ್ಸಿಂಗ್ ರೂಮ್ನತ್ತ ತೆರಳಿದರು.
- — Mohit Das (@MohitDa29983755) December 15, 2019 " class="align-text-top noRightClick twitterSection" data="
— Mohit Das (@MohitDa29983755) December 15, 2019
">— Mohit Das (@MohitDa29983755) December 15, 2019
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಮೈದಾನದಲ್ಲಿರುವ ಫೀಲ್ಡರ್ಗಳಿಗೆ ಹೊರಗೆ ಕುಳಿತಿರುವ ವ್ಯಕ್ತಿಗಳು ಅಂಪೈರ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೇಳುವುದು, ಆಟಗಾರರ ಒತ್ತಡಕ್ಕೆ ಮಣಿದು ಅಂಪೈರ್ ತಮ್ಮ ತೀರ್ಪನ್ನು ಹಿಂತೆಗೆದುಕೊಂಡು ಥರ್ಡ್ ಅಂಫೈರ್ಗೆ ಮನವಿ ಮಾಡುವುದನ್ನು ಇದುವರೆಗೆ ಕ್ರಿಕೆಟ್ನಲ್ಲಿ ನಾನು ಕಂಡಿರಲಿಲ್ಲ. ನಿಯಗಳೆಲ್ಲಾ ಎಲ್ಲಿ ಹೋದವು ಎಂಬುದು ನನಗೆ ಗೊತ್ತಾಗುತ್ತಿಲ್ಲ, ಅಂಪೈರ್ ಹಾಗೂ ರೆಫ್ರಿ ಇದರ ಕಡೆ ಗಮನ ನೀಡಬೇಕು ಎಂದು ಅವರು ಅಸಮಧಾನ ಹೊರ ಹಾಕಿದರು.
ಮೂರನೇ ಅಂಪೈರ್ ರವೀಂದ್ರ ಜಡೇಜಾ ಔಟ್ ಎಂದು ತೀರ್ಪು ನೀಡಿದ್ದಾರೆ. ಭಾರತ ತಂಡ ಪಂತ್(71) ಅಯ್ಯರ್(70) ಅವರ ಅರ್ಧಶತಕದ ನೆರವಿನಿಂದ 287 ರನ್ಗಳಿಸಿತು. ಈ ಮೊತ್ತವನ್ನು ವಿಂಡೀಸ್ ತಂಡ 2 ವಿಕೆಟ್ ಕಳೆದುಕೊಂಡು 47.5 ಓವರ್ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.