ನವದೆಹಲಿ: ಟೀಂ ಇಂಡಿಯಾ ಸ್ಟಾರ್ ಓಪನರ್ ರೋಹಿತ್ ಶರ್ಮಾ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರು ಸಂತಸ ಹೊರಹಾಕಿದ್ದಾರೆ.
-
"I am extremely honored and humbled"- @ImRo45 on being nominated for the prestigious Rajiv Gandhi Khel Ratna Award 2020 🗣️🙌 #TeamIndia pic.twitter.com/GmHqpEvwkF
— BCCI (@BCCI) May 31, 2020 " class="align-text-top noRightClick twitterSection" data="
">"I am extremely honored and humbled"- @ImRo45 on being nominated for the prestigious Rajiv Gandhi Khel Ratna Award 2020 🗣️🙌 #TeamIndia pic.twitter.com/GmHqpEvwkF
— BCCI (@BCCI) May 31, 2020"I am extremely honored and humbled"- @ImRo45 on being nominated for the prestigious Rajiv Gandhi Khel Ratna Award 2020 🗣️🙌 #TeamIndia pic.twitter.com/GmHqpEvwkF
— BCCI (@BCCI) May 31, 2020
ನಿಗದಿತ ಓವರ್ಗಳ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅದ್ಭುತ ದಾಖಲೆ ಹೊಂದಿದ್ದು, ಈಗಾಗಲೇ 2019ರಲ್ಲಿ ಐಸಿಸಿ ಏಕದಿನ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಅವರ ಹೆಸರು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುತ್ತಿದ್ದಂತೆ ರೋಹಿತ್ ಶರ್ಮಾ ಸಂತಸ ಹಂಚಿಕೊಂಡಿದ್ದು, ಅದರ ವಿಡಿಯೋ ಬಿಸಿಸಿಐ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿದೆ.
ಖೇಲ್ ರತ್ನ ಪ್ರಶಸ್ತಿಗೆ ರೋಹಿತ್... ಅರ್ಜುನ ಪ್ರಶಸ್ತಿಗೆ ಇಶಾಂತ್, ಧವನ್, ದೀಪ್ತಿ ಶರ್ಮಾ ನಾಮ ನಿರ್ದೇಶನ
ಅತ್ಯುನ್ನತ ಪ್ರಶಸ್ತಿಗೆ ಬಿಸಿಸಿಐನಿಂದ ನಾಮನಿರ್ದೇಶನಗೊಂಡಿರುವುದಕ್ಕೆ ತುಂಬಾ ಗೌರವ ಹಾಗೂ ವಿನಮ್ರನಾಗಿದ್ದೇನೆ. ಅದಕ್ಕಾಗಿ ಬಿಸಿಸಿಐ, ತಂಡದ ಎಲ್ಲ ಸದಸ್ಯರು, ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ. ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಇದರ ಜತೆಗೆ ವೇಗದ ಬೌಲರ್ ಇಶಾಂತ್ ಶರ್ಮಾ, ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನಗೊಳಿಸಲಾಗಿದೆ.