ಮೆಲ್ಬೋರ್ನ್ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಯೋಬಬಲ್ ಕುರಿತು ಧ್ವನಿಯತ್ತಿದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಬಯೋಬಬಲ್ನಲ್ಲಿ ಜೀವಿಸುವುದು ಸಮರ್ಥನೀಯವಾದದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಡ ಹೆಚ್ಚಾದ ಹಿನ್ನೆಲೆ ಕೆಲಕಾಲ ನಿಷೇಧವಾಗಿದ್ದ ಕ್ರಿಕೆಟ್ ಮತ್ತೆ ಮರಳಿದ್ದು, ಬಯೋಬಬಲ್ ಸೃಷ್ಠಿಸಿ ಟೂರ್ನಿಗಳನ್ನು ನಡೆಸಲಾಗುತ್ತಿದೆ. ಆದರೆ, ಇದು ಆಟಗಾರರ ಮಾನಸಿಕ ಸ್ಥಿತಿಗಳನ್ನು ಅಸ್ಥಿರಗೊಳ್ಳಿಸುತ್ತಿದೆ ಎನ್ನಲಾಗುತ್ತಿದೆ.
ಇದರ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್, ಇದು ಸಮರ್ಥನೀಯವಾದ ಜೀವನ ಶೈಲಿಯಲ್ಲ. ನೀವು ಹೊರಗಿನ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕವಿಲ್ಲದೆ ಹೋಟೆಲ್ ರೂಮಿನೊಳಗೆ ಇರಬೇಕಾಗುತ್ತದೆ.
ಕೆಲವು ಹುಡುಗರು ಐಪಿಎಲ್ ಬಯೋಬಬಲ್ನಲ್ಲಿದ್ದವರು. ದೀರ್ಘಕಾಲದಿಂದ ಅವರ ಕುಟುಂಬ, ಮಡದಿ ಮತ್ತು ಮಕ್ಕಳನ್ನು ನೋಡೇ ಇಲ್ಲ ಎಂದು 2020ರ ಐಪಿಎಲ್ನಿಂದ ಹೊರಗುಳಿದಿದ್ದ ಸ್ಟಾರ್ಕ್ ಹೇಳಿದ್ದಾರೆ.
ಇದು ತುಂಬಾ ಕಠಿಣವೆನಿಸಲಿದೆ. ನಾವು ಕ್ರಿಕೆಟ್ ಆಡಬಹುದು. ಆದರೆ, ಇದರ ಬಗ್ಗೆ ನಾವು ಹೆಚ್ಚು ದೂರು ನೀಡಲು ಸಾಧ್ಯವಿಲ್ಲ. ಕ್ರಿಕೆಟಿಗರು, ಸಿಬ್ಬಂದಿ ಹಾಗೂ ಅಧಿಕಾರಿಗಳ ಯೋಗಕ್ಷೇಮದ ದೃಷ್ಟಿಯಿಂದ ನೋಡುವುದಾದರೆ, ನೀವು ಬಯೋಬಬಲ್ನಲ್ಲಿ ಎಷ್ಟು ಸಮಯದವರೆಗೆ ಉಳಿಯಬಹುದು ? ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಇದೇ ಮಾತನ್ನಾಡಿದ್ದು, ಕೋವಿಡ್ ಸಾಂಕ್ರಾಮಿಕದ ನಡುವೆ ಸತತ ಸರಣಿ ಆಡುವ ವೇಳೆ ಬಯೋಬಬಲ್ನಲ್ಲಿ ಉಳಿಯುವುದು ತುಂಬಾ ಕಷ್ಟ. ಆಟಗಾರರು ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಹೊರಗಿನ ಪ್ರಪಂಚದೊಂದಿಗೆ ಕಡಿಮೆ ಸಂಪರ್ಕದೊಂದಿಗೆ ಇರುವುದಲ್ಲದೆ, ಕುಟುಂಬದಿಂದಲೂ ದೂರ ಉಳಿದಿದ್ದಾರೆ.
ಸಾಂಕ್ರಾಮಿಕ ರೋಗದ ಮಧ್ಯೆ ಬಯೋ ಬೈಬಲ್‌ನಲ್ಲಿ ಕ್ರಿಕೆಟ್ ಆಯೋಜಿಸಲಾಗುತ್ತಿದೆ. ಸದ್ಯಕ್ಕೆ ಈ ಸ್ಥಿತಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸತತ ಸರಣಿ ಆಟಗಾರರ ಮಾನಸಿಕ ಆಯಾಸಕ್ಕೆ ಕಾರಣವಾಗುತ್ತಿದೆ ಎಂದಿದ್ದರು.
ಭಾರತ ತಂಡ ನವೆಂಬರ್ 12 ರಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 3 ವಾರಗಳ ಕಾಲ ಕ್ವಾರಂಟೈನ್ಗೊಳಗಾಗಲಿದೆ. ನಂತರ 3 ಎಕದಿನ , 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳನ್ನಾಡಲಿದೆ.