ನವದೆಹಲಿ: ಜೋಫ್ರಾ ಆರ್ಚರ್ ಮತ್ತು ಮೈಕೆಲ್ ಹೋಲ್ಡಿಂಗ್ ಅವರ ಬೌಲಿಂಗ್ ತಾವು ಕಂಡ ಅತ್ಯಂತ ಸುಲಭ ಹಾಗೂ ಸಾಪ್ರದಾಯಿಕ ಬೌಲಿಂಗ್ ಕ್ರಮಗಳನ್ನು ಹೊಂದಿದ್ದಾರೆ ಎಂದು ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಇಯಾನ್ ಬಿಷಪ್ ಭಾನುವಾರ ತಿಳಿಸಿದ್ದಾರೆ. ಅದರಲ್ಲೂ ಆರ್ಚ ಬೌಲಿಂಗ್ಗೆ ಹೆಚ್ಚು ರೇಟ್ ಕೊಡಬಹುದು ಎಂದು ಹೇಳಿದ್ದಾರೆ.
"ಪ್ರಸ್ತುತ ಬೌಲರ್ಗಳ ಬೌಲಿಂಗ್ ತಂತ್ರಗಳ ಬಗ್ಗೆ ಮಾತನಾಡುವುದಾದರೆ, ಜೋಫ್ರಾ ಆರ್ಚರ್ ಬೌಲಿಂಗ್ ಮೈಕಲ್ ಹೋಲ್ಡಿಂಗ್ ಬೌಲಿಂಗ್ಅನ್ನು ನೆನಪಿಸುತ್ತದೆ ಹೋಲ್ಡಿಂಗ್ ಮತ್ತು ಆರ್ಚರ್ ಅವರ ಬೌಲಿಂಗ್ ಆ್ಯಕ್ಷನ್ ನಾನು ನೋಡಿದ ಅತ್ಯಂತ ಸುಲಭವಾದ, ಸಾಂಪ್ರದಾಯಿಕ ಆ್ಯಕ್ಷನ್ಗಳಾಗಿವೆ. ಆದರೆ ನಾನು ಆರ್ಚರ್ ಅವರ ಸಾಮರ್ಥ್ಯಕ್ಕೆ ಹೆಚ್ಚು ರೇಟ್ ನೀಡುತ್ತೇನೆ ಎಂದು ಬಿಷಪ್ ಐಸಿಸಿ ಪಾಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಆರ್ಚರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 7 ಟೆಸ್ಟ್, 14 ಏಕದಿನ ಮತ್ತು 1 ಟಿ 20 ಪಂದ್ಯವನ್ನಾಡಿದ್ದು 55 ವಿಕೆಟ್ ಕಬಳಿಸಿದ್ದಾರೆ. ಈ ವೇಗದ ಬೌಲರ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು ಮತ್ತು ಶೀಘ್ರದಲ್ಲೇ ತಮ್ಮ ವೇಗ ಮತ್ತು ಆಕ್ರಮಣಶೀಲತೆಯ ಮೂಲಕ ವಿಶ್ವಕ್ರಿಕೆಟ್ನ ಮನೆ ಮಾತಾದರು.
25 ರ ಹರೆಯದವರು ಆರ್ಚರ್ 2019 ರ ವಿಶ್ವಕಪ್ನ ಫೈನಲ್ನಲ್ಲಿ 'ಸೂಪರ್ ಓವರ್' ನಲ್ಲಿ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ಗೆ ಮೊದಲ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ತಂಡದುಕೊಡುವಲ್ಲಿ ಯಶಸ್ವಿಯಾಗಿದ್ದರು. ನಂತರ ಆ್ಯಶಸ್ ಸರಣಿಯಲ್ಲೂ ಅವಕಾಶ ಪಡೆದು ಸ್ಟಿವ್ ಸ್ಮಿತ್ ಅವರೊ0ಂದಿಗೆ ಅತ್ಯುತ್ತಮ ಕಾದಾಟ ನಡೆಸಿದ್ದರು. ಇದೀಗ ಮೂರು ತಿಂಗಳ ನಂತರ ಕ್ರಿಕೆಟ್ಗೆ ಮರಳಿದ್ದು, ಜುಲೈ 8ರಂದು ವಿಂಡೀಸ್ ವಿರುದ್ಧ ಇಂಗ್ಲೆಂಡ್ ತಂಡ ಕಣಕ್ಕಿಳಿಯುತ್ತಿದೆ. ಮೂಲ ನೆಲೆ ವಿಂಡೀಸ್ ಆಗಿರುವ ಆರ್ಚರ್ ತನ್ನ ತವರಿನ ತಂಡದ ವಿರುದ್ಧ ಯಾವ ರೀತಿ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.