ಕೊಲೊಂಬೊ : ಇದೇ ತಿಂಗಳ 26ರಿಂದ ಆರಂಭವಾಗಲಿರುವ ಲಂಕಾ ಪ್ರೀಮಿಯರ್ ಲೀಗ್(ಎಲ್ಪಿಎಲ್) ಕಾಮೆಂಟರಿ ಮಾಡಲು ಶ್ರೀಲಂಕಾಗೆ ಬಂದಿಳಿದಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ ಹರ್ಷೆಲ್ ಗಿಬ್ಸ್ ಕೊಲೊಂಬೋ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕೊಲೊಂಬೊ ಕಿಂಗ್ಸ್ ಈ ಮೊದಲು ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವ್ ವಾಟ್ಮೋರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಆದರೆ, ಅವರು ವೈಯಕ್ತಿಕ ಕಾರಣಗಳಿಂದ ಲೀಗ್ನಿಂದ ಹಿಂದೆ ಸರಿದಿದ್ದರು.
ನಂತರ ಶ್ರೀಲಂಕಾ ತಂಡ ವಿಶ್ವಕಪ್ ವಿನ್ನಿಂಗ್ ಕೋಚ್ ಇಂಗ್ಲೆಂಡ್ನ ಕಬೀರ್ ಅಲಿಯನ್ನ ನೇಮಕ ಮಾಡಲಾಗಿತ್ತು. ಆದರೆ, ಅವರಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿದ್ದರಿಂದ ಅವರೂ ಕೂಡ ಲೀಗ್ನಿಂದ ಹೊರ ಬಿದ್ದಿದ್ದರು.
ಕೋಚ್ ಹುಡುಕಾಟದಲ್ಲಿದ್ದ ಕೊಲೊಂಬೊ ಕಾಮೆಂಟರಿಗಾಗಿ ಶ್ರೀಲಂಕಾಗೆ ಬಂದಿದ್ದ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅವರಿಗೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ರಂಗನಾ ಹೆರಾತ್ ಸಹಾಯಕರಾಗಿ ನೇಮಕಗೊಂಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿರುವ ಗಿಬ್ಸ್ ದಕ್ಷಿಣ ಆಫ್ರಿಕಾ ಪರ 90 ಟೆಸ್ಟ್, 248 ಏಕದಿನ ಪಂದ್ಯ ಹಾಗೂ 23 ಟಿ20 ಪಂದ್ಯಗಳನ್ನಾಡಿದ್ದರು. ಅವರು ಟೆಸ್ಟ್ನಲ್ಲಿ 6167 ಮತ್ತು ಏಕದಿನ ಕ್ರಿಕೆಟ್ನಲ್ಲಿ 8094 ರನ್‌ಗಳನ್ನ ಸಿಡಿಸಿದ್ದಾರೆ.