ಕ್ಯಾನ್ಬೆರಾ: ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ದೀದರ್ ನೈಟ್ ಬುಧವಾರ ನಡೆದ ಟಿ-20 ವಿಶ್ವಕಪ್ನ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ಮೂರೂ ಫಾರ್ಮೆಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಏಕೈಕ ಮಹಿಳಾ ಕ್ರಿಕೆಟರ್ ಹಾಗೂ ಇಂಗ್ಲೆಂಡ್ ತಂಡದ ಮೊದಲ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ.
29 ವರ್ಷದ ನೈಟ್, ಥಾಯ್ಲೆಂಡ್ ವಿರುದ್ಧ ಕೇವಲ 66 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 108 ರನ್ ಗಳಿಸಿದ್ದರು. ಈ ಮೂಲಕ ಏಕದಿನ, ಟೆಸ್ಟ್ ಹಾಗೂ ಟಿ-20 ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು.
-
Heather Knight now has a century in every format of the game.
— T20 World Cup (@T20WorldCup) February 26, 2020 " class="align-text-top noRightClick twitterSection" data="
What a player 💯#WIvTHA | #WeAreEngland | #T20WorldCup pic.twitter.com/EcdCpkYYSw
">Heather Knight now has a century in every format of the game.
— T20 World Cup (@T20WorldCup) February 26, 2020
What a player 💯#WIvTHA | #WeAreEngland | #T20WorldCup pic.twitter.com/EcdCpkYYSwHeather Knight now has a century in every format of the game.
— T20 World Cup (@T20WorldCup) February 26, 2020
What a player 💯#WIvTHA | #WeAreEngland | #T20WorldCup pic.twitter.com/EcdCpkYYSw
ನೈಟ್ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಶತಕ(157) ಸಿಡಿಸಿದ್ದರು. 2017ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ(106) ಶತಕ ಸಿಡಿಸಿದ್ದರು.
ಇನ್ನು ಇಂಗ್ಲೆಂಡ್ ತಂಡದ ಪುರುಷ ಕ್ರಿಕೆಟಿಗರು 3 ಫಾರ್ಮೆಟ್ನಲ್ಲೂ ಶತಕ ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ನೈಟ್ ಪುರುಷರನ್ನು ಮೀರಿಸಿ ಈ ಸಾಧನೆ ಮಾಡಿದ್ದಾರೆ. ಆದರೆ ಪುರುಷರ ಕ್ರಿಕೆಟ್ನಲ್ಲಿ ಈಗಾಗಲೇ 15 ಆಟಗಾರರು 3 ಫಾರ್ಮೆಟ್ನಲ್ಲೂ ಶತಕ ದಾಖಲಿಸಿದ್ದಾರೆ. ಇದರಲ್ಲಿ ಭಾರತದ ಮೂವರು ಆಟಗಾರರು ಸೇರಿದ್ದಾರೆ.