ETV Bharat / sports

'ನನ್ನ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ, ಎಲ್ಲರಿಗೂ ದೀಪಾವಳಿ ಶುಭಾಶಯ' - ದೆಹಲಿ ಗಾಲ್ಫ್​ ಕ್ಲಬ್​

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಎಲ್ಲರಿಗೂ ದೀಪಾವಳಿ ಶುಭಾಶಯ ಕೋರಿದ್ದಾರೆ.

kapil dev
ಕಪಿಲ್ ದೇವ್​​
author img

By

Published : Nov 13, 2020, 5:28 PM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕ್ರಿಕೆಟ್​ ದಂತಕತೆ ಕಪಿಲ್ ದೇವ್ ಟ್ವಿಟರ್​​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನನ್ನ ಹೃದಯ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಈ ವಿಡಿಯೋದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅವರು, ಈ ವರ್ಷ ಎಲ್ಲರಲ್ಲೂ ಸಂಭ್ರಮ ಮನೆ ಮಾಡಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ನಾನು ಆರೋಗ್ಯ ಮತ್ತು ಸಂತೋಷದಿಂದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಗುರುವಾರವಷ್ಟೇ ಕಪಿಲ್ ದೇವ್ ತಾವು ದೆಹಲಿಯ ಗಾಲ್ಫ್​ ಕ್ಲಬ್​ನಲ್ಲಿ ಗಾಲ್ಫ್ ಆಡುವ ವಿಡಿಯೋವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಗಾಲ್ಫ್ ಅಥವಾ ಕ್ರಿಕೆಟ್​​ಗೆ ಮರಳುವ ವೇಳೆಯ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.

ಹೃದಯ ಶಸ್ತ್ರ ಚಿಕಿತ್ಸೆಯ ನಡೆದ ಕೆಲವು ವಾರಗಳ ನಂತರ ಟ್ವಿಟರ್​ನಲ್ಲಿ ಆಗಾಗ ಕಾಣಿಸಿಕೊಳ್ಳುವ ಅವರು ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಪಿಲ್ ದೇವ್​ 1994ರಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದಾಗಿನಿಂದಲೂ ಹವ್ಯಾಸಿ ಗಾಲ್ಫ್​ ಆಟಗಾರರಾಗಿದ್ದಾರೆ. ಅವರು ವರ್ಷದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.