ETV Bharat / sports

ರೊಟೇಶನ್​ ಪಾಲಿಸಿ ತಲೆನೋವು.. ತಂಡದ ಆಯ್ಕೆಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ರೂಟ್​..

ಆರ್ಚರ್​ ಕಮ್​ಬ್ಯಾಕ್​ ಮಾಡಿರುವುದು ಅದ್ಭುತ ವಿಚಾರ, ಅಲ್ಲದೆ ಅವರು ಬೌಲಿಂಗ್ ಮಾಡುವುದನ್ನು ನೋಡಲು ತುಂಬಾ ಖುಷಿಯಾಗಿದೆ. ನಾವು ಕೂಡ ಉತ್ಸುಕರಾಗಿದ್ದೇವೆ. ಆತ ವಿಶ್ವ ದರ್ಜೆಯ ಬೌಲರ್ ಮತ್ತು ಅದ್ಭುತ ಕೌಶಲ್ಯಗಳನ್ನು ಹೊಂದಿರುವ ಬೌಲರ್​ ಆಗಿದ್ದಾರೆ ಎಂದು ರೂಟ್ ಹೇಳಿದ್ದಾರೆ..

author img

By

Published : Feb 23, 2021, 7:49 PM IST

ಭಾರತ ಮತ್ತು ಇಂಗ್ಲೆಂಡ್ 3ನೇ ಟೆಸ್ಟ್​
ಜೋ ರೂಟ್​

ಅಹಮದಾಬಾದ್ : ಬುಧವಾರದಿಂದ ಭಾರತ ವಿರುದ್ಧದ ನಡೆಯುವ ಮೂರನೇ ಟೆಸ್ಟ್ ಪಂದ್ಯದ ಬೌಲಿಂಗ್ ಸಂಯೋಜನೆಯ ಬಗ್ಗೆ ಇನ್ನೂ ನಮಗೆ ಸ್ಪಷ್ಟತೆ ಇಲ್ಲ. ಅದನ್ನು ಅಂತಿಮಗೊಳಿಸುವ ಮುನ್ನ ಕಾಯುತ್ತೇವೆ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಮಂಗಳವಾರ ಹೇಳಿದ್ದಾರೆ.

"ಈ ಮೈದಾನದ ಬಗ್ಗೆ ಮತ್ತು ಪಿಂಕ್ ಬಾಲ್​ ಕ್ರಿಕೆಟ್‌ನ ಬಗ್ಗೆ ನಾವು ಹೊಂದಿರುವ ಸೀಮಿತ ಮಾಹಿತಿಯೊಂದಿಗೆ ಸೂಕ್ತ ತಂಡವನ್ನು ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ನಾವು ನಮ್ಮ ಸಮಯವನ್ನು ತೆಗೆದುಕೊಳ್ಳಲಿದ್ದೇವೆ. ಪಂದ್ಯಕ್ಕೆ ಹೊರಡುವ ಮುನ್ನ ನಾವು ಇದರ ಬಗ್ಗೆ ಅಲೋಚಿಸಿ ಆಯ್ಕೆಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ಸುದ್ದಿಗೋಷ್ಠಿಯಲ್ಲಿ ರೂಟ್ ಹೇಳಿದ್ದಾರೆ.

ಇಂಗ್ಲೆಂಡ್​ ತಂಡಕ್ಕೆ ರೊಟೇಶನ್​ ಪಾಲಿಸಿಯಿಂದ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಎರಡೂ ವಿಭಾಗದ ಆಯ್ಕೆಯಲ್ಲೂ ಗೊಂದಲಕ್ಕೆ ಸಿಲುಕಿದೆ. ಗಾಯದಿಂದ ಚೇತರಿಸಿಕೊಂಡಿರುವ ಜೋಫ್ರಾ ಆರ್ಚರ್​ ತಂಡಕ್ಕೆ ಮರಳಿದ್ದಾರೆ.

ಇನ್ನು, ಎರಡನೇ ಟೆಸ್ಟ್​ನಲ್ಲಿ ವಿಶ್ರಾಂತಿ ಪಡೆದಿದ್ದ ಆ್ಯಂಡರ್ಸನ್​ 3ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ, ಅಹರ್ನಿಶಿ ಪಂದ್ಯವಾಗಿರುವುದರಿಂದ ಸ್ಟುವರ್ಟ್​ ಬ್ರಾಡ್​ ಕೂಡ ಮಾರ್ಕ್​ವುಡ್​ ಜೊತೆಗೆ ಸ್ಪರ್ಧೆಯಲ್ಲಿದ್ದಾರೆ.

ಆರ್ಚರ್​ ಕಮ್​ಬ್ಯಾಕ್​ ಮಾಡಿರುವುದು ಅದ್ಭುತ ವಿಚಾರ, ಅಲ್ಲದೆ ಅವರು ಬೌಲಿಂಗ್ ಮಾಡುವುದನ್ನು ನೋಡಲು ತುಂಬಾ ಖುಷಿಯಾಗಿದೆ. ನಾವು ಕೂಡ ಉತ್ಸುಕರಾಗಿದ್ದೇವೆ. ಆತ ವಿಶ್ವ ದರ್ಜೆಯ ಬೌಲರ್ ಮತ್ತು ಅದ್ಭುತ ಕೌಶಲ್ಯಗಳನ್ನು ಹೊಂದಿರುವ ಬೌಲರ್​ ಆಗಿದ್ದಾರೆ ಎಂದು ರೂಟ್ ಹೇಳಿದ್ದಾರೆ.

ನಾಳೆ ಬೆಳಗ್ಗೆ ಮೈದಾನಕ್ಕೆ ತೆರಳಿ ಪಿಚ್​ ಬಗ್ಗೆ ತಿಳಿದುಕೊಂಡ ನಂತರ ಸಂಪೂರ್ಣ ತಂಡ ಆಯ್ಕೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿ ಈ ರಾತ್ರಿ ಕೂಡ ಅಭ್ಯಾಸ ಮಾಡಲಿದ್ದೇವೆ. ಇನ್ನು, ಈ ಪಂದ್ಯದಲ್ಲಿ ತೇವಾಂಶ ಯಾವ ರೀತಿ ಕೆಲಸ ಮಾಡಲಿದೆ ಎಂಬುದು ನಮಗೆ ಅರಿವಾಗಲಿದೆ ಎಂದು ರೂಟ್​ ತಿಳಿಸಿದ್ದಾರೆ.

ಬುಧವಾರ ಅಹ್ಮದಾಬಾದ್​ನ ಮೊಟೆರಾದಲ್ಲಿ ಮೂರನೇ ಟೆಸ್ಟ್​ ಪಂದ್ಯ 2:30ಕ್ಕೆ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.