ETV Bharat / sports

ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವಿನಲ್ಲೂ ಆಡಿದ ಮಂದೀಪ್, ರಾಣಾರನ್ನು ಮೆಚ್ಚಿದ ತೆಂಡೂಲ್ಕರ್​

ಶನಿವಾರ ಕೆಕೆಆರ್ ತಂಡ ನಿತೀಶ್ ರಾಣಾ ಅವರ ಮಾವ ಕ್ಯಾನ್ಸರ್​ನಿಂದ ಮೃತಪಟ್ಟಿರುವ ವಿಷಯ ತಿಳಿದು ಡೆಲ್ಲಿ ವಿರುದ್ಧ ಕಣಕ್ಕಿಳಿದಿದ್ದರು. ಶುಕ್ರವಾರ ಮಂದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ನಿಧನರಾಗಿದ್ದರು. ಆದರೆ ತಂದೆ ಕ್ರಿಕೆಟ್​ ಅನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಮಂದೀಪ್ ತವರಿಗೆ ಮರಳದೆ ಪಂಜಾಬ್ ತಂಡದ ಪರ ಆಡಲು ನಿರ್ಧರಿಸಿದ್ದರು.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
author img

By

Published : Oct 25, 2020, 4:40 PM IST

ಹೈದರಾಬಾದ್​: ಕುಟುಂಬದಲ್ಲಿ ದುರಂತ ನಡೆದಿದ್ದರು ತಮ್ಮ ಗೌರವಾನ್ವಿತ ಫ್ರಾಂಚಸಿಗಳ ಪರವಾಗಿ ಕಣಕ್ಕಿಳಿದ ಮಂದೀಪ್ ಸಿಂಗ್ ಹಾಗೂ ನಿತೀಶ್ ರಾಣಾರನ್ನು ಲೆಜೆಂಡರಿ ಬ್ಯಾಟ್ಸ್​ಮನ್​ ಸಚಿನ್ ತೆಂಡೂಲ್ಕರ್​ ಶ್ಲಾಘಿಸಿದ್ದಾರೆ.

ನಿತೀಶ್ ರಾಣಾ
ನಿತೀಶ್ ರಾಣಾ

ಶನಿವಾರ ಕೆಕೆಆರ್ ತಂಡ ನಿತೀಶ್ ರಾಣಾ ಅವರ ಮಾವ ಕ್ಯಾನ್ಸರ್​ನಿಂದ ಮೃತಪಟ್ಟಿರುವ ವಿಷಯ ತಿಳಿದು ಡೆಲ್ಲಿ ವಿರುದ್ಧ ಕಣಕ್ಕಿಳಿದಿದ್ದರು. ಶುಕ್ರವಾರ ಮಂದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ನಿಧನರಾಗಿದ್ದರು. ಆದರೆ ತಂದೆ ಕ್ರಿಕೆಟ್​ ಅನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಮಂದೀಪ್ ತವರಿಗೆ ಮರಳದೆ ಪಂಜಾಬ್ ತಂಡದ ಪರ ಆಡಲು ನಿರ್ಧರಿಸಿದ್ದರು.

  • Loss of a loved one hurts, but what’s more heartbreaking is when one doesn’t get to say a final goodbye. Praying for @mandeeps12, @NitishRana_27 and their families to heal from this tragedy. Hats off for turning up today. Well played.

    — Sachin Tendulkar (@sachin_rt) October 24, 2020 " class="align-text-top noRightClick twitterSection" data=" ">

" ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ತುಂಬಾ ನೋವಿರುತ್ತದೆ. ಅದರಲ್ಲೂ ಅವರಿಗೆ ಅಂತಿಮ ವಿದಾಯ ಹೇಳಲೂ ನಮ್ಮಿಂದ ಸಾಧ್ಯವಾಗದಿದ್ದರೆ ಹೃದಯವೇ ಛಿದ್ರವಾದಂತೆ ನೋವಾಗುತ್ತದೆ. ಮಂದೀಪ್ ಮತ್ತು ನಿತೀಶ್ ಕುಟುಂಬ ದುಃಖದಿಂದ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಇಂದು ಅವರು ಆಡಿದ್ದಕ್ಕಾಗಿ ಹ್ಯಾಟ್ಸ್‌ಆಫ್. ಚೆನ್ನಾಗಿ ಆಡಿದ್ದೀರಿ " ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಮಂದೀಪ್ ಸಿಂಗ್
ಮಂದೀಪ್ ಸಿಂಗ್

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್ 59 ರನ್​ಗಳ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್​ಗಳ ಅಂತರದಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ಕೆಕೆಆರ್ ಪರ ರಾಣಾ ಆಕರ್ಷಕ 81 ರನ್​ಗಳಿಸಿ ಮಿಂಚಿದರು. ಈ ಆಟವನ್ನು ಅವರು ತಮ್ಮ ಮಾವನಿಗೆ ಅರ್ಪಿಸಿದರೆ, ಪಂಜಾಬ್ ತಂಡದ ಗೆಲುವನ್ನು ಮಂದೀಪ್​ ತಮ್ಮ ತಂದೆ ಅರ್ಪಿಸಿದ್ದಾರೆ. ಜೊತೆಗೆ ಈ ಪಂದ್ಯದಲ್ಲಿ ತಂಡದ ಎಲ್ಲಾ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.