ಮೊಹಾಲಿ: ಸೋಲುವ ಭೀತಿಯಲ್ಲಿದ್ದ ಪಂಜಾಬ್ ತಂಡಕ್ಕೆ ನಿನ್ನೆ ಆಸರೆಯಾಗಿದ್ದು ಸ್ಯಾಮ್ ಕರ್ರನ್. ಕೊನೆ 4 ಓವರ್ಗಳಲ್ಲಿ ಡೆಲ್ಲಿ ತಂಡದ ಗೆಲುವಿಗೆ 22ರನ್ಗಳ ಅವಶ್ಯಕತೆ ಇದ್ದಾಗ ಬೌಲಿಂಗ್ ಮಾಡಲು ಕಣಕ್ಕಿಳಿದ ಕರ್ರನ್ ತಂಡಕ್ಕೆ ಮಹತ್ವದ ತಿರುವು ನೀಡಿದರು.
🕺🕺🕺
— IndianPremierLeague (@IPL) April 1, 2019 " class="align-text-top noRightClick twitterSection" data="
Some bhangra moves there, courtesy @realpreityzinta & @CurranSM 😎😎 pic.twitter.com/VAeXq3I07o
">🕺🕺🕺
— IndianPremierLeague (@IPL) April 1, 2019
Some bhangra moves there, courtesy @realpreityzinta & @CurranSM 😎😎 pic.twitter.com/VAeXq3I07o🕺🕺🕺
— IndianPremierLeague (@IPL) April 1, 2019
Some bhangra moves there, courtesy @realpreityzinta & @CurranSM 😎😎 pic.twitter.com/VAeXq3I07o
ಪಂಜಾಬ್ನ ಬಿಂದ್ರಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ತಂಡಗಳ ನಡುವಿನ ಪಂದ್ಯ ಯಾರೂ ಉಹೇ ಮಾಡದ ರೀತಿಯಲ್ಲಿ ತಿರುವು ಪಡೆದುಕೊಂಡಿತು. ಸುಲಭ ಗೆಲುವಿನ ಸಂಭ್ರಮದಲ್ಲಿದ್ದ ಶ್ರೇಯಸ್ ಅಯ್ಯರ್ ಪಡೆಗೆ ಕೊನೆಯಲ್ಲಿ ವಿಲನ್ ಆಗಿದ್ದು ಪಂಜಾಬ್ ತಂಡದ ಆಲ್ರೌಂಡರ್ ಸ್ಯಾಮ್ ಕರ್ರನ್. ತಾವೂ ಎಸೆದ 2.2 ಓವರ್ನಲ್ಲಿ ಕೇವಲ 11ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಸೇರಿ 4ವಿಕೆಟ್ ಪಡೆದುಕೊಂಡರು. ಹೀಗಾಗಿ ತಂಡ 14ರನ್ಗಳ ಗೆಲುವು ಕಾಣುವಂತಾಯಿತು. ಇದರ ಜತೆಗೆ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕರ್ರನ್ ಮೊದಲ ಹ್ಯಾಟ್ರಿಕ್ ಪಡೆದು ಮಿಂಚಿದರು.
ಇನ್ನು ತಂಡ ರೋಚಕ ಗೆಲುವು ದಾಖಲು ಮಾಡುತ್ತಿದ್ದಂತೆ ಪಂದ್ಯದ ಹೀರೋ ಸ್ಯಾಮ್ ಕರ್ರನ್ ಜತೆ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಬಾಂಗ್ರಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಅದರ ವಿಡಿಯೋ ಇದೀಗ ಐಪಿಎಲ್ ಟ್ವಿಟರ್ನಲ್ಲಿ ಶೇರ್ ಆಗಿದೆ.