ರಾವಲ್ಪಿಂಡಿ: ವೇಗದ ಬೌಲರ್ಗಳಾದ ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲೂ 95 ರನ್ಗಳಿಂದ ಮಣಿಸುವ ಮೂಲಕ 2-0ಯಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದೆ.
ಪಾಕಿಸ್ತಾನ ನೀಡಿದ್ದ 397ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೊನೆಯ ದಿನ ಮೊದಲಾರ್ಧದಲ್ಲಿ 241ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ಐಡೆನ್ ಮ್ಯಾರ್ಕ್ರಮ್(108) ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ದಿಡೀರ್ ಕುಸಿತ ಅನುಭವಿಸಿ 274 ರನ್ಗಳಿಗೆ ಆಲೌಟ್ ಆಯಿತು. ಅಫ್ರಿದಿ ಮತ್ತು ಹಸನ್ ಅಲಿ ದಾಳಿಗೆ ಕುಸಿದು ಕೇವಲ 33 ರನ್ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು 95 ರನ್ಗಳ ಸೋಲು ಕಂಡಿತು.
-
Pakistan take the series 2-0!
— ICC (@ICC) February 8, 2021 " class="align-text-top noRightClick twitterSection" data="
Hasan Ali took a match-haul of 10 wickets to lead the side to their first Test series win against South Africa since 2003!#PAKvSA ➡️ https://t.co/dHR9CvAE8T pic.twitter.com/JmlVXXkopY
">Pakistan take the series 2-0!
— ICC (@ICC) February 8, 2021
Hasan Ali took a match-haul of 10 wickets to lead the side to their first Test series win against South Africa since 2003!#PAKvSA ➡️ https://t.co/dHR9CvAE8T pic.twitter.com/JmlVXXkopYPakistan take the series 2-0!
— ICC (@ICC) February 8, 2021
Hasan Ali took a match-haul of 10 wickets to lead the side to their first Test series win against South Africa since 2003!#PAKvSA ➡️ https://t.co/dHR9CvAE8T pic.twitter.com/JmlVXXkopY
ಮ್ಯಾರ್ಕ್ರಮ್ 108, ರಾಸಿ ವ್ಯಾನ್ ಡರ್ ಡಾಸ್ಸೆನ್ 48 ಹಾಗೂ ಟೆಂಬ ಬವುಮಾ 61 ರನ್ಗಳಿಸಿ ಗೆಲುವಿಗೆ ಪ್ರಯತ್ನ ನಡೆಸಿದರು. ಆದರೆ, ಡಿಕಾಕ್, ಪ್ಲೆಸಿಸ್ ಎಲ್ಗರ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಗೆಲ್ಲುವ ಪಂದ್ಯವನ್ನು ಹರಿಣ ಪಡೆ ಕಳೆದುಕೊಂಡಿತು.
ಶಾಹೀನ್ ಅಫ್ರಿದಿ 51ಕ್ಕೆ 4, ಹಸನ್ ಅಲಿ 60ಕ್ಕೆ 5 ಹಾಗೂ ಯಾಸಿರ್ ಅಲಿ 1 ವಿಕೆಟ್ ಪಡೆದರು.
ಎರಡೂ ಇನ್ನಿಂಗ್ಸ್ ಸೇರಿ 9 ವಿಕೆಟ್ ಪಡೆದ ಹಸನ್ ಅಲಿ ಪಂದ್ಯ ಶ್ರೇಷ್ಠ ಹಾಗೂ ಮೊಹಮ್ಮದ್ ರಿಜ್ವಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.