ಮುಂಬೈ: ಎರಡು ದಿನಗಳ ಹಿಂದೆಯಷ್ಟೇ ಗಂಡು ಮಗುವಿನ ತಂದೆಯಾಗಿದ್ದ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ಮದುವೆಗೂ ಮೊದಲೇ ಮಗುವಿಗೆ ಪೋಷಕರಾಗಿದ್ದಾರೆ. ನತಾಶಾ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ಸಂತೋಷ ಹಂಚಿಕೊಂಡಿದ್ದ ಪಾಂಡ್ಯ ಮಗುವಿನ ಕೈ ಬೆರಳು ಹಿಡಿದುಕೊಂಡಿದ್ದ ಫೋಟೋವನ್ನ ಶೇರ್ ಮಾಡಿಕೊಂಡಿದ್ದರು.
-
The blessing from God 🙏🏾❤️ pic.twitter.com/xqcmbVIUIr
— hardik pandya (@hardikpandya7) August 1, 2020 " class="align-text-top noRightClick twitterSection" data="
">The blessing from God 🙏🏾❤️ pic.twitter.com/xqcmbVIUIr
— hardik pandya (@hardikpandya7) August 1, 2020The blessing from God 🙏🏾❤️ pic.twitter.com/xqcmbVIUIr
— hardik pandya (@hardikpandya7) August 1, 2020
ಇದೀಗ ತಮ್ಮ ಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಪಾಂಡ್ಯ 'ದೇವರಿಂದ ಸಿಕ್ಕ ಆಶೀರ್ವಾದ' ಎಂದು ಬರೆದುಕೊಂಡಿದ್ದಾರೆ. 2020 ಜನವರಿ 1 ರಂದು ನತಾಶಾ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ 31ರಂದು ತಮ್ಮ ಭಾವಿ ಪತ್ನಿ ಗರ್ಭಿಣಿ ಎಂದು ತಿಳಿಸಿದ್ದರು. ಇದೀಗ ಮದುವೆಗೂ ಮೊದಲೇ ತಂದೆಯಾಗಿ ಸಂಭ್ರಮಿಸುತ್ತಿದ್ದಾರೆ. ಆದರೆ, ಪಾಂಡ್ಯ ಲಾಕ್ಡೌನ್ ಸಂದರ್ಭದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ ಎಂಬ ಗಾಳಿ ಸುದ್ದಿ ಇದ್ದು, ಈ ಕುರಿತು ಸಾಮಾಜಿಕ ಜಾಲಾತಾಣಗಳಲ್ಲಿ ಫೋಟೋಗಳು ವೈರಲ್ ಆಗಿದ್ದವು. ಆದರೆ, ಈ ಕುರಿತು ಪಾಂಡ್ಯ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.