ETV Bharat / sports

ಭಾನುವಾರ ಕಿವೀಸ್​ ಸರಣಿಗೆ ಭಾರತ ತಂಡ ಆಯ್ಕೆ: ​ಕಮ್​ಬ್ಯಾಕ್ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ - ಕಮ್​ಬ್ಯಾಕ್​ ನಿರೀಕ್ಷೆಯಲ್ಲಿ ಹಾರ್ದಿಕ್​

ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಭಾರತ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್​, ಶಸ್ತ್ರಚಿಕಿತ್ಸೆ ಮುಗಿಸಿ ಫಿಟ್​ ಆಗಿದ್ದಾರೆ. ಅಲ್ಲದೆ ಕಿವೀಸ್​ ಎ ಸರಣಿಗೂ ಕೂಡ ಆಯ್ಕೆಯಾಗಿದ್ದಾರೆ.

hardik pandya comeback
hardik pandya comeback
author img

By

Published : Jan 11, 2020, 7:46 PM IST

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧದ ಪ್ರವಾಸಕ್ಕೆ ಭಾನುವಾರ ತಂಡದ ಆಯ್ಕೆ ನಡೆಯಲಿದ್ದು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಭಾರತ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್​, ಶಸ್ತ್ರಚಿಕಿತ್ಸೆ ಮುಗಿಸಿ ಫಿಟ್​ ಆಗಿದ್ದಾರೆ. ಅಲ್ಲದೆ ಕಿವೀಸ್​ ಎ ಸರಣಿಗೂ ಆಯ್ಕೆಯಾಗಿದ್ದಾರೆ.

ಕಿವೀಸ್ ಪ್ರವಾಸಕ್ಕೆ ತಂಡದ ಆಯ್ಕೆಯನ್ನು ಬಿಸಿಸಿಐ ಭಾನುವಾರ ಪ್ರಕಟಿಸಲಿದ್ದು ಆಲ್​ರೌಂಡರ್ ಹಾರ್ದಿಕ್​​ ಪಾಂಡ್ಯ ತಂಡಕ್ಕೆ ವಾಪಾಸಾಗುವ ಸಾಧ್ಯತೆಯಿದೆ. ವೇಗದ ಬೌಲಿಂಗ್​ ಜೊತೆಗೆ ಸ್ಫೋಟಕ ಬ್ಯಾಟಿಂಗ್​ ನಡೆಸುವ ಸಾಮರ್ಥ್ಯವಿರುವುದರಿಂದ ಬಿಸಿಸಿಐ ಹಾರ್ದಿಕ್​ ಪಾಂಡ್ಯಗೆ ಮಣೆ ಹಾಕುವ ಸಾಧ್ಯತೆಯಿದೆ.

ಜನವರಿ 24ರಿಂದ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟಿ20, 3 ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ.

ಭಾರತ ಎ ತಂಡ ಈಗಾಗಲೇ ಕಿವೀಸ್ ಪ್ರವಾಸದಲ್ಲಿದ್ದು ರಾಷ್ಟ್ರೀಯ​ ತಂಡದ ಆಟಗಾರರು ಗಾಯಗೊಂಡರೆ ಎ ತಂಡದ ಆಟಗಾರರನ್ನು ಆಯ್ಕೆಮಾಡಿಕೊಳ್ಳಲು ಟೀಮ್ ಇಂಡಿಯಾಗೆ ಒಂದು ಅವಕಾಶವಿದೆ. ಹಾರ್ದಿಕ್​ ಪಾಂಡ್ಯ ಕಿವೀಸ್​ ಎ ತಂಡದ ವಿರುದ್ಧ ಫಿಟ್​ನೆಸ್​ ಸಾಬೀತುಪಡಿಸಿದರೆ ಮಾತ್ರ ಆಯ್ಕೆಗೆ ಅವಕಾಶ ಸಿಗಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.